ಕೆ.ಆರ್.ಪುರ: ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ಭಟ್ಟರಹಳ್ಳಿಯ ಶ್ರೀ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದರು. ನೂರಾರು ಕಾರ್ಯಕರ್ತರೊಂದಿಗೆ ಜ್ಯೋತಿನಗರ, ಮೇಡಹಳ್ಳಿ, ಪಾರ್ವತಿ ನಗರ, ವೈಟ್ ಸಿಟಿ, ಸೀಗೆಹಳ್ಳಿ, ಚಿಕ್ಕಬಸವನಪುರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮತ ಪ್ರಚಾರ ನಡೆಸಿದರು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಮತ ನೀಡಬೇಕು ಎಂಬುದನ್ನು ಸಾರ್ವಜನಿಕರಿಗೆ ಮನಮರಿಕೆ ಮಾಡಿಕೊಡುತ್ತಿದ್ದರು, ಇನ್ನೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ಡಿ.ಕೆ.ಮೋಹನ್ ಬಾಬುರವರಿಗೆ ಬೃಹತ್ ಸೇಬಿನಹಾರ ಹಾಕಿ ಅಭಿನಂದನೆ ಸಲ್ಲಿಸಿದರು.
‘ಶಾಸಕರಿಗೂ ವಯಸ್ಸಾಗಿದ್ದು ವಿಶ್ರಾಂತಿಯ ಅಗತ್ಯವಿದೆ, ಹಾಗಾಗಿ ಬಿಜೆಪಿಗೆ ಓಟ್ ಹಾಕಿ’
‘ಮೊದಲೆಲ್ಲ ಸಿದ್ದರಾಮಯ್ಯನವರಿಗೆ ಜಿಲಿಬಿ ಕಂಡ್ರೆ ಆಗ್ತಿರ್ಲಿಲ್ಲ’-ಜಿಲಿಬಿ ಅಂದ್ರೇನು..?