Monday, December 23, 2024

Latest Posts

ಮೈಲಾರಿ ಹೋಟೇಲ್‌ನಲ್ಲಿ ದೋಸೆ ರೆಡಿ ಮಾಡಿದ ಪ್ರಿಯಾಂಕಾ ಗಾಂಧಿ..

- Advertisement -

ಮೈಸೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ರಾಹುಲ್ ಸಹೋದರಿ, ಪ್ರಿಯಾಂಕಾ ವಾದ್ರಾ ಬಂದಿದ್ದು, ಇಂದು ಶೃಂಗೇರಿಯಲ್ಲಿ ಸಭೆ ನಡೆಸಿದ್ದರು. ಇದಕ್ಕೂ ಮುನ್ನ ಮೈಸೂರಿನ ಪ್ರಸಿದ್ಧ ಮೈಲಾರಿ ಹೊಟೇಲ್‌ಗೆ ಹೋಗಿ, ದೋಸೆ ಸವಿದ ಪ್ರಿಯಾಂಕಾ, ಅಲ್ಲಿನ ಕಿಚನ್ ಒಳಗೆ ಹೋಗಿ, ಮಾಲೀಕರೊಂದಿಗೆ ದೋಸೆ ರೆಡಿ ಮಾಡಿ ಎಂಜಾಯ್ ಮಾಡಿದರು.

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಶೇರ್‌ ಮಾಡಿ, ಬರೆದುಕೊಂಡಿರುವ ಪ್ರಿಯಾಂಕಾ ಗಾಂಧಿ, ಇಂದು ಬೆಳಿಗ್ಗೆ ಪ್ರಸಿದ್ಧ, ಹಳೆಯ ಹೊಟೇಲ್ ಆಗಿರುವ ಮೈಲಾರಿ ಹೊಟೇಲ್ ಮಾಲೀಕರೊಂದಿಗೆ ದೋಸೆ ಮಾಡಿ ಬಹಳ ಖುಷಿಯಾಯಿತು. ಪ್ರಾಮಾಣಿಕ, ಕಠಿಣ ಪರಿಶ್ರಮ ಮತ್ತು ಉದ್ಯಮಕ್ಕೆ ಉಜ್ವಲ ಉದಾಹರಣೆ ಇದಾಗಿದೆ.

ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು. ನಿಮ್ಮ ಹೊಟೇಲ್ ದೋಸೆಗಳು ರುಚಿಕರವಾಗಿದ್ದವು. ನಾನು ನನ್ನ ಮಗಳನ್ನ ಈ ದೋಸೆ ಸವಿಯಲು ಮೈಲಾರಿ ಹೊಟೇಲ್‌ಗೆ ಕರೆತರಲು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

- Advertisement -

Latest Posts

Don't Miss