ನವದೆಹಲಿ: ಮೊದಲೆಲ್ಲ ವಿಚ್ಛೇದನ ಬೇಕೆಂದರೆ 6 ತಿಂಗಳುಗಳ ಕಾಲ ಕಾಯಬೇಕಿತ್ತು. ಅಲ್ಲದೇ ಜೊತೆಗಿರಬೇಕಿತ್ತು. ಆ ಸಮಯದಲ್ಲಿ ಮತ್ತೆ ಪ್ರೀತಿ ಹುಟ್ಟಿ, ಇಬ್ಬರೂ ಒಂದಾಗಲು ಕಾಲಾವಕಾಶ ಕೊಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಪತಿ- ಪತ್ನಿ ಇಬ್ಬರ ಒಪ್ಪಿಗೆ ಇದ್ದರೆ, ಕಾನೂನಿನ ನಿಯಮದ ಪ್ರಕಾರ, ವಿಚ್ಛೇದನ ಪಡೆಯಬಹುದು.
ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ಇಷ್ಟವಿಲ್ಲದಿದ್ದರೂ 6 ತಿಂಗಳುಗಳ ಕಾಲ ಒಟ್ಟಿಗೆ ಇರುವ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ. ಹಾಗಾಗಿ ಬೇಕಾದಾಗ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಚ್ಛೇದನ ಪಡೆಯಬಹುದು ಎಂದು ಹೇಳಿದೆ. ಸುಪ್ರೀಂ ಪರಿಚ್ಛೇದ, 142ರ ಅಡಿಯಲ್ಲಿ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಂ ನಾಥ್ ಮತ್ತು ಜೆ.ಕೆ.ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನ ಪೀಠ, ಈ ತೀರ್ಪು ಕೊಟ್ಟಿದೆ.
ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಪೊಲೀಸರ ಎಂಟ್ರಿ, ಅರ್ಧಕ್ಕೆ ನಿಂತ ಕಾರ್ಯಕ್ರಮ..