ಮೂಡಿಗೆರೆ: ಇಂದು ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ವಯಸ್ಸಾದವರು, ಯುವಕರು, ಪರೀಕ್ಷೆ ಬರೆಯಲು ತೆರಳುವವರು, ಗರ್ಭಿಣಿ, ಬಾಣಂತಿಯರು ಎಲ್ಲರೂ ಮತಗಟ್ಟೆವರೆಗೆ ಬಂದು ಮತದಾನ ಮಾಡುತ್ತಿದ್ದಾರೆ.
ಇದೇ ರೀತಿ ಮಧುಮಗಳೊಬ್ಬಳು, ಮತಗಟ್ಟೆಗೆ ಬಂದು, ಮತದಾನ ಮಾಡಿದ್ದಾಳೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ರೇಷ್ಮೆ ಸೀರೆಯುಟ್ಟು, ಮೇಕಪ್ ಮಾಡಿ ರೆಡಿಯಾಗಿದ್ದ ಮಧುಮಗಳು, ಮತಗಟ್ಟೆಗೆ ಬಂದು ಮತ ಚಲಾಯಿಸಿ ಬಳಿಕ, ಮದುವೆ ಮನೆಗೆ ನಡೆದಿದ್ದಾಳೆ. ಈ ಮೂಲಕ ಮತ ಚಲಾವಣೆ ಎಷ್ಟು ಮುಖ್ಯ ಅನ್ನೋದನ್ನ ತೋರಿಸಿದ್ದಾರೆ.
ಕೋಲಾರ : ಇನ್ನೊಂದೆಡೆ ಕೋಲಾರದಲ್ಲಿ ಮತದಾನ ಶುರುವಾಗಿದ್ದು, ಮತದಾರರನ್ನು ಸೆಳೆಯಲು, ಸಾಂಸ್ಕೃತಿಕ ಮತಗಟ್ಟೆ ಸಿಂಗಾರಗೊಂಡಿದೆ.
ಮತದಾರರನ್ನು ಸೆಳೆಯಲು ಸಾಂಸ್ಕೃತಿಕ ಪರಂಪರೆಯ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಕೋಲಾರದ ಕಠಾರಿಪಾಳ್ಯದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸಾಂಸ್ಕೃತಿಕ ಮತಗಟ್ಟೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ 168 ಇದ್ದು, ಕೋಲಾರ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಿಸುವ ಮತಗಟ್ಟೆ ನಿರ್ಮಾಣ ಮಾಡಲಾಗಿದೆ.
‘ಲಾಠಿ ಏಟು ಬಿದ್ದಿದ್ದಕ್ಕೆ ಕ್ಷಮಿಸಿ, ನೀವು ಕೊಟ್ಟ ಪ್ರೀತಿಗೆ ಚಿರಋಣಿ’