- Advertisement -
ಶಿಗ್ಗಾಂವಿ: ಈಗಾಗಲೇ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಸಿಎಂ ಬೊಮ್ಮಾಯಿ, ತಮ್ಮ ಕ್ಷೇತ್ರವಾದ ಶಿಗ್ಗಾವಿಗೆ ಹೋಗಿ, ಮತದಾನ ಮಾಡಿದ್ದಾರೆ. ಮತದಾನಕ್ಕೂ ಮುನ್ನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಟುಂಬ ಸಮೇತರಾಗಿ ಶಿಗ್ಗಾವಿಯ ಗಣಪತಿ ದೇವಸ್ಥಾನಕ್ಕೆ ಹೋದ ಸಿಎಂ ಬೊಮ್ಮಾಯಿ, ಗೆಲುವಿಗಾಗಿ ಪ್ರಾರ್ಥಿಸಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಾದ ಬಳಿಕ ಮತಗಟ್ಟೆಗೆ ಆಗಮಿಸಿ, ಕ್ಯೂನಲ್ಲಿ ನಿಂತು, ಬೊಮ್ಮಾಯಿ ಮತ ಚಲಾಯಿಸಿದ್ದಾರೆ. ಇದಾದ ಬಳಿಕ ಸ್ಥಳೀಯರ ಜೊತೆ ಒಂದಷ್ಟು ಹೊತ್ತು ಮಾತುಕತೆ ನಡೆಸಿದರು.
ಇನ್ನೊಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು, ಮತ ಚಲಾಯಿಸಿದರು. ಪುತ್ರ ವಿಜಯಾನಂದ, ಸೊಸೆ, ಮೊಮ್ಮಗ, ಮೊಮ್ಮಗಳೊಂದಿಗೆ ಸೇರಿ ಯಡಿಯೂರಪ್ಪ, ಶಿವಮೊಗ್ಗದ ಶಿಕಾರಿಪುರದಲ್ಲಿ ಮತದಾನ ಮಾಡಿದ್ದಾರೆ.
- Advertisement -