Sunday, December 22, 2024

Latest Posts

ಒಂದೇ ಕುಟುಂಬದ 65ಕ್ಕೂ ಹೆಚ್ಚು ಮಂದಿಯಿಂದ ಒಮ್ಮೆಲೆ ಮತದಾನ..

- Advertisement -

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಶತಾಯುಷಿಗಳು, ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು, ಬಾಣಂತಿಯರು, ಗರ್ಭಿಣಿಯರು, ಮಧುಮಗಳು ಹೀಗೆ ಹಲವರು ಮತಗಟ್ಟೆ ತನಕ ಬಂದು, ಮತ ಚಲಾಯಿಸಿ ಹೋಗಿದ್ದಾರೆ.

ಅದೇ ರೀತಿ ಚಿಕ್ಕಬಳ್ಳಾಪುರದ ಬಾದಾಮ್ ಕುಟುಂಬಸ್ಥರೆಲ್ಲ ಸೇರಿ, ಮತಗಟ್ಟೆ ತನಕ ಬಂದು, ಮತ ಚಲಾಯಿಸಿದ್ದಾರೆ. ಅರೇ ಇದರಲ್ಲೇನು ಆಶ್ಚರ್ಯ ಎಂದು ಕೇಳುತ್ತಿದ್ದೀರಾ. ಇದರಲ್ಲಿ ಇರುವ ವಿಶೇಷತೆ ಅಂದ್ರೆ, ಇವರ ಕುಟುಂಬದಲ್ಲಿ 65 ಮಂದಿ ಇದ್ದಾರೆ. ಆ 65 ಮಂದಿ ಪ್ರತೀ ವರ್ಷ ಒಮ್ಮೆಲೆ ಮತಗಟ್ಟೆಗೆ ಬಂದು, ಮತ ಚಲಾಯಿಸುತ್ತಾರಂತೆ.

ಪ್ರತಿದಿನ ತಮ್ಮದೇ ಆದ ಕೆಲಸ ಕಾರ್ಯದಲ್ಲಿ ತೊಡಗುವ ಇವರಿಗೆ, ಯಾವಾಗಲಾದರೂ ಒಮ್ಮೆ ಎಲ್ಲರೂ ಕೂಡಿ ಇರುವುದಕ್ಕೆ ಸಮಯ ಸಿಗುತ್ತದೆ. ಅಂಥ ಸಮಯದಲ್ಲಿ ಹೀಗೆ ಎಲ್ಲರೂ ಸೇರಿ, ಮತ ಹಾಕಲು ಬರುವುದು ಕೂಡಾ ಒಂದಾಗಿದೆ. ಈ ದಿನ ಎಲ್ಲರೂ ತಮ್ಮ ಕೆಲಸ ಕಾರ್ಯಗಳಿಗೆ ರಜೆ ಹಾಕಿ, ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಾರೆ. ಇಲ್ಲಿಯವರೆಗೆ ಇವರು 15ಕ್ಕಿಂತ ಹೆಚ್ಚು ಬಾರಿ ಮತದಾನ ಮಾಡಿದ್ದಾರಂತೆ.

ಮತಗಟ್ಟೆಗೆ ಬಂದು ಮತದಾನ ಮಾಡಿ, ಮದುವೆ ಮನೆಗೆ ತೆರಳಿದ ಮಧುಮಗಳು

ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ ಸಿಎಂ ಮತ್ತು ಮಾಜಿ ಸಿಎಂ..

ಮತದಾನ ಮಾಡುವ ಭರದಲ್ಲಿ ದಾಖಲೆ ಮರೆತು ಬಂದ ರಾಜಮಾತೆ ಪ್ರಮೋದಾದೇವಿ

- Advertisement -

Latest Posts

Don't Miss