ದೆಹಲಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕೆಲವರು ಇಲ್ಲ ಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಅಂಥ ಸುಳ್ಳು ಸುದ್ದಿಯನ್ನು ನಂಬಬೇಡಿ. ನಾಳೆ ಯಾವುದೇ ಪ್ರಮಾಣವಚನ ಸ್ವೀಕಾರ ಇಲ್ಲ ಎಂದು ರಣ್ದೀಪ್ ಸೂರ್ಜೆವಾಲ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾಳೆ ಸಿಎಂ ಯಾರೆಂದು ಸ್ಪಷ್ಟಗೊಳಿಸಿದ ಬಳಿಕ, ಎಲ್ಲಿ , ಯಾವಾಗ ಪ್ರಮಾಣವಚನ ಸ್ವೀಕರಿಸುವುದು ಎಂದು ನಿರ್ಧರಿಸಲಾಗುತ್ತದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯನವರೇ ಸಿಎಂ ಆಗುತ್ತಾರೆಂದು ಸುದ್ದಿಯಾಗಿದ್ದು, ಡಿ.ಕೆ.ಶಿವಕುಮಾರ್ ಡಿಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಎಲ್ಲ ಊಹಾಪೋಹಗಳಿಗೂ ಸೂರ್ಜೇವಾಲಾ ಬ್ರೇಕ್ ಹಾಕಿದ್ದು, ನಾಳೆ ಪ್ರಮಾಣವಚನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್.ಎನ್.ನಾರಾಯಣಸ್ವಾಮಿ ಸಚಿವರಾಗಬೇಕು ಎಂದು ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳು..
‘ಇಬ್ಬರಿಗೂ ಎರಡೆರಡು ವರ್ಷ ಸಿಎಂ ಸ್ಥಾನ ನೀಡಲಿ. ಉಳಿದ ಒಂದು ವರ್ಷ ದಲಿತರಿಗೆ ಸಿಎಂ ಸ್ಥಾನ ನೀಡಲಿ’