Thursday, October 23, 2025

Latest Posts

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುಂದೆ ತನ್ನ ಮಗುವನ್ನ ಎಸೆದ ತಂದೆ, ಯಾಕೆ ಗೊತ್ತಾ..?

- Advertisement -

ಭೋಪಾಲ್: ವೇದಿಕೆಯಲ್ಲಿ ಕುಳಿತಿದ್ದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎದುರಿಗೆ ತಂದೆಯೋರ್ವ ತನ್ನ ಮಗುವನ್ನ ಎಸೆದ ಘಟನೆ ನಡೆದಿದೆ.

ಮಧ್ಯ ಪ್ರದೇಶದ ಸಾಗರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಈತನನ್ನು ಮುಖೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಈತನ ಒಂದು ವರ್ಷದ ಮಗುವಿಗೆ ಹೃದಯದಲ್ಲಿ ಹೋಲ್ ಇದ್ದು, ಅದರ ಆಪರೇಷನ್ ಖರ್ಚಿಗಾಗಿ 3ವರೆ ಲಕ್ಷ ರೂಪಾಯಿ ಬೇಕಾಗಿದೆ. ಆದರೆ ಅಷ್ಟು ಹಣ, ತಂದೆಯ ಬಳಿ ಇಲ್ಲ. ಅವರು ಈಗಾಗಲೇ ಮಗುವಿಗಾಗಿ 4 ಲಕ್ಷ ಖರ್ಚು ಮಾಡಿದ್ದಾರೆ. ಆದರೆ ಇನ್ನು ಅವರ ಬಳಿ ಹಣವಿಲ್ಲ.

ಸಾಗರ್ ಎಂಬ ಸ್ಥಳದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿ ಅವರ ಬಳಿ ಪರಿಹಾರ ಕೇಳಬೇಕು ಎಂದು ಪತಿ- ಪತ್ನಿ ಬಂದಿದ್ದಾರೆ. ಆದರೆ, ಅಲ್ಲಿದ್ದ ಪೊಲೀಸರು ಅವರನ್ನು ಸಿಎಂ ಬಳಿ ಹೋಗಲು ಬಿಡಲಿಲ್ಲ. ಹಾಗಾಗಿ ಆ ತಂದೆ ತನ್ನ ಮಗುವನ್ನು ಸಿಎಂ ಬಳಿ ಎಸೆದಿದ್ದಾನೆ. ಇದನ್ನು ಕಂಡ ಪೊಲೀಸರು ತಕ್ಷಣ, ಮಗುವನ್ನು ತೆಗೆದು ತಾಯಿಗೆ ಕೊಟ್ಟು, ಹೀಗೆ ಬಿಸಾಡಲು ಕಾರಣ ಕೇಳಿದ್ದಾರೆ.

ಕಾರಣ ತಿಳಿದ ಬಳಿಕ, ಸಿಎಂ ಬಳಿ ಹೋಗಲು ಅವಕಾಶ ಕೊಟ್ಟಿದ್ದಾರೆ. ಸಿಎಂ ಬಳಿ ಪತಿ- ಪತ್ನಿ ಇಬ್ಬರೂ ಪರಿಹಾರ ಕೇಳಿದ್ದು, ಇದಕ್ಕೆ ಬೇಕಾದಷ್ಟು ಹಣಕಾಸಿನ ವ್ಯವಸ್ಥೆ ಮಾಡಿ, ಮಗುವಿಗೆ ಚಿಕಿತ್ಸೆ ಕೊಡಿಸಲು ಸಿಎಂ ಸೂಚನೆ ನೀಡಿದ್ದಾರೆ.

ಫೋಟೋಶೂಟ್‌ ವಿಷಯವಾಗಿ ಮದುವೆ ಮನೆಯಲ್ಲಿ ಗಲಾಟೆ: ವೀಡಿಯೋ ವೈರಲ್

ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್

ಖುಷಿಯಿಂದ ಡಾನ್ಸ್ ಮಾಡುತ್ತಲೇ, ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ: ವೀಡಿಯೋ ವೈರಲ್

- Advertisement -

Latest Posts

Don't Miss