Thursday, March 28, 2024

Latest Posts

ಮನೆಯವರ ನೆಮ್ಮದಿ ಕೆಡಿಸಲು ಮಹಿಳೆಯ ಈ 3 ಗುಣಗಳೇ ಕಾರಣವಂತೆ..

- Advertisement -

ಮನೆಯಲ್ಲಿರುವ ನೆಮ್ಮದಿ ಹಾಳಾಗಲು, ಬರೀ ಹೆಣ್ಣು ಮಕ್ಕಳ ಮಾತು, ಗುಣಗಳೇ ಕಾರಣವಾಗಬೇಕೆಂದಿಲ್ಲ. ಗಂಡಸರ ಬುದ್ಧಿಗಳು ಕೂಡ ಕೆಲವೊಮ್ಮೆ ಕೈ ಕೊಡುತ್ತದೆ. ಆಗಲೂ ಮನೆಯಲ್ಲಿ ಜಗಳವಾಗುತ್ತದೆ. ಆದರೆ ಕೆಲ ಹೆಣ್ಣು ಮಕ್ಕಳಿಗಿರುವ 3 ಗುಣಗಳಿಂದ, ಆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಲೇ ಇರುತ್ತದೆಯಂತೆ. ಹಾಗಾದ್ರೆ ಮನೆಯವರ ನೆಮ್ಮದಿ ಹಾಳು ಮಾಡುವ ಹೆಣ್ಣಿನ ಆ 3 ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.

ಮೊದಲ ಗುಣ, ಮುಂದಾಗುವ ಪರಿಣಾಮವನ್ನು ಯೋಚಿಸದೇ, ಮಾತನಾಡುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಗುಣ. ನೀವು ಮುಂದೇನಾಗುತ್ತದೆ ಅನ್ನೋದರ ಬಗ್ಗೆ ಯೋಚಿಸದೇ, ಒಂದೆರಡು ಬಾರಿ ಏನಾದರೂ ಮಾತನಾಡಬಹುದು. ಯಾವುದಾದರೂ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಪದೇ ಪದೇ ಹೀಗೆ ಮಾಡುವುದರಿಂದ ನಿಮ್ಮ ಜೀವನ ಹಾಳಾಗುವುದರ ಜೊತೆಗೆ, ನಿಮ್ಮ ಮನೆಯವರ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಏನೇ ಮಾತನಾಡುವುದಿದ್ದರೂ, ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ, ಯೋಚಿಸಿ, ಮಾತನಾಡಿ.

ಎರಡನೇಯ ಗುಣ, ಸುಳ್ಳು ಹೇಳುವುದು. ಸುಳ್ಳು ಹೇಳುವ ಹೆಂಗಸರು ಮನೆಯಲ್ಲಿರುವಾಗ, ಆ ಮನೆಜನ ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ. ಒಂದು ಸುಳ್ಳು ಹೇಳಿ, ಅದನ್ನು ಮುಚ್ಚಿಡಲು ಮತ್ತೊಂದು ಸುಳ್ಳು. ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತ, ಸಮಸ್ಯೆಯ ಸುಳಿಗೆ ಸಿಲುಕಬೇಕಾಗುತ್ತದೆ. ಹಾಗಾಗಿ ನಿಮ್ಮ ಜೀವನದ ಬಗ್ಗೆ, ಹಣದ ವಿಷಯ, ಏನೇ ಇರಲಿ, ಅದರ ಬಗ್ಗೆ ಇನ್ನೊಬ್ಬರ ಎದುರು ಸುಳ್ಳು ಹೇಳಬೇಡಿ.

ಮೂರನೇಯ ಗುಣ, ಸ್ವಾರ್ಥಿಯಂತೆ ವರ್ತಿಸುವುದು. ಕೆಲವು ಹೆಣ್ಣು ಮಕ್ಕಳಿಗೆ, ತನಗೆ, ತನ್ನ ಪತಿಗೆ, ತನ್ನ ಮಕ್ಕಳಿಗಷ್ಟೇ ಒಳ್ಳೆಯದಾಗಲಿ ಅನ್ನುವ ಸೆ ಇರುತ್ತದೆ. ಹೀಗೆ ಆಸೆ ಇರುವುದು ತಪ್ಪಲ್ಲ. ಆದರೆ, ಅದೇ ಸ್ವಾರ್ಥವಾಗಿ ಬದಲಾಗುವುದು ಒಳ್ಳೆಯದಲ್ಲ. ಯಾವಾಗ ಓರ್ವ ಹೆಣ್ಣು ಸ್ವಾರ್ಥದ ಬಗ್ಗೆ ಯೋಚಿಸುತ್ತಾಳೋ, ಆಗ ಆಕೆ ಮನೆಯವರನ್ನೆಲ್ಲ ಒಂದೇ ರೀತಿ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗಲೇ ಮನೆಯ ನೆಮ್ಮದಿ ಹಾಳಾಗುತ್ತದೆ. ಇನ್ನು ಈ 3 ಗುಣಗಳು ಬರೀ ಹೆಣ್ಣಿಗಷ್ಟೇ ಇರಬೇಕು ಎಂದೇನಿಲ್ಲ. ಪುರುಷರಿಗೆ ಈ ಗುಣಗಳಿದ್ದರೂ, ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.

ಬ್ರಾಹ್ಮಿ ಮುಹೂರ್ತದಲ್ಲಿ ಇಂಥ ತಪ್ಪನ್ನ ಎಂದಿಗೂ ಮಾಡಬೇಡಿ..

ಇಂಥ ಜನರನ್ನು ಎಂದಿಗೂ ಮನೆಗೆ ಬರಮಾಡಿಕೊಳ್ಳಬೇಡಿ..

ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..

- Advertisement -

Latest Posts

Don't Miss