ಹಾಸನ: ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಾಸನದಲ್ಲಿ ಭಾರಿ ಅವಾಂತರವಾಗಿದ್ದು, ಬಿರುಗಾಳಿಗೆ ಮನೆಯ ಮೇಲ್ಚಾವಣಿಗಳು ಹಾರಿಹೋಗಿದೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು, ಭಾರೀ ಅವಾಂತರ ತಪ್ಪಿದೆ.
ಹಾಸನ ನಗರದ ಹೊರ ವಲಯ ದೇವೇಗೌಡ ನಗರದಲ್ಲಿ ಈ ಘಟನೆ ನಡೆದಿದ್ದು, ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹಲವರು ಮನೆ ಕಳೆದುಕೊಂಡಿದ್ದಾರೆ.
ಇಷ್ಟೇ ಅಲ್ಲದ, ವರುಣನ ಆರ್ಭಟಕ್ಕೆ ಮದುವೆ ಮನೆಯೊಂದರ, ಮೇಲ್ಛಾವಣಿ ಹಾರಿಹೋಗಿದ್ದು, ಸಂಭ್ರಮದಲ್ಲಿರಬೇಕಾದ ಕುಟುಂಬಸ್ಥರು, ಆತಂಕದಲ್ಲಿದ್ದಾರೆ. ಮದುವೆಗೆಂದು ತಂದಿದ್ದ ಸಾವಿರಾರು ಬೆಲೆಯ ಸೀರೆ, ಬಟ್ಟೆ, ವಸ್ತುಗಳು ಬೀದಿಪಾಲಾಗಿದೆ. ಜೂನ್ 4ರಂದು ಅಲ್ತಾಫ್ ಎಂಬುವವರ ತಂಗಿ ಮದುವೆ ನಿಶ್ಚಯವಾಗಿತ್ತು.
ಮಳೆ ಹಾನಿಯಿಂದ ಮದುವೆ ತಯಾರಿ ಮಾಡಲಾಗದೇ, ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಮನೆಯಲ್ಲಿ ನೆಮ್ಮದಿಯಾಗಿ ವಾಸಿಸುವುದಕ್ಕೂ ಕಷ್ಟವಾಗಿದೆ. ಶೀಘ್ರವಾಗಿ ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ. ಆದರೆ ರಾತ್ರಿ ಈ ಅವಘಡವಾಗಿದ್ದರೂ, ಅಧಿಕಾರಿಗಳು ಬರದ ಕಾರಣ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವತಿ ಸಾವಾಗಿದೆ : ಬಸವರಾಜ ಬೊಮ್ಮಾಯಿ
ಹಾಸನದ ಮಸೀದಿಯಲ್ಲಿ ಕಳ್ಳತನ: ಕಂಪ್ಯೂಟರ್, ಕ್ಯಾಮೆರಾ ಕದ್ದೊಯ್ದ ಕಳ್ಳ..
ಕಾಂಗ್ರೆಸ್ ಆಡಳಿತದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಅಶ್ವತ್ಥನಾರಾಯಣ್




