Friday, July 11, 2025

Latest Posts

‘ಮಹಾರಾಜ ಪಾರ್ಕಿನಲ್ಲಿ ಕಾಂಕ್ರೀಟ್ ಕರಣ ಮಾಡದೇ ಹಿಂದಿನ ರೀತಿ ಉಳಿಯಲಿ’

- Advertisement -

ಹಾಸನ: ಅನೇಕರಿಂದ ವಿರೋಧಗಳು ಬಂದರೂ ಕೂಡ ವಿರುದ್ಧವಾಗಿ ಮಹಾರಾಜ ಪಾರ್ಕಿನಲ್ಲಿ ಕಾಂಕ್ರೀಟ್ ಕರಣ ಮಾಡಲಾಗಿದ್ದು, ಎಲ್ಲಾರ ಅಭಿಪ್ರಾಯಪಡೆದು ಹಿಂದೆ ಇದ್ದ ರೀತಿಯಲ್ಲೆ ಉದ್ಯಾನವನ ಉಳಿಸಲಾಗುವುದು. ಜನರ ಸೇವೆ ಎಂದರೇ ಜನಾರ್ಧನ ಸೇವೆ ಎಂದುಕೊಂಡು ನಮ್ಮ ತಂದೆಯಂತೆ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.

ನಗರದ ಮಹಾರಾಜ ಪಾರ್ಕ್ ಹಿತಾರಕ್ಷಣಾ ವೇದಿಕೆ, ಜಿಲ್ಲಾ ಅಮೆಚುರ್ ಬಾಡಿ ಬಿಲ್ಢರ್ ಸಂಸ್ಥೆ, ಜಿಲ್ಲಾ ಕ್ರೀಡಾ ಪರಿಷತ್, ಜಿಲ್ಲಾ ಪವರ್ ಲಿಪ್ಟಿಂಗ್ ಸಂಸ್ಥೆ, ಜಿಲ್ಲಾ ಯೋಗಸಂಸ್ಥೆ, ಜಿಲ್ಲಾ ಪಂಜಕುಸ್ತಿ ಸಂಸ್ಥೆ, ರಾಜ್ಯ ಗ್ರಾಮೀಣ ಕ್ರಿಡೆಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಾರಾಜ ಪಾರ್ಕಿನಲ್ಲಿ ಈ ಹಿಂದೆ ಕಾಂಕ್ರೀಟ್ ಕರಣ ನಡೆಯುತ್ತಿರುವ ಬಗ್ಗೆ ಅನೇಕರಿಂದ ವಿರೋಧಗಳು ವ್ಯಕ್ತಪಡಿಸಿದಾಗ ನಾನು ಕೂಡ ಅವರ ಜೊತೆ ಕೈಜೋಡಿಸಿ ಹೋರಾಟ ಮಾಡಲಾಗಿದೆ. ಈ ಪಾರ್ಕ್‌ನಲ್ಲಿ ಕಾಂಕ್ರೀಟ್ ಕರಣ ಹೆಚ್ಚು ಮಾಡಬಾರದು. ಹಿಂದೆ ಇದ್ದ ರೀತಿಯಲ್ಲೆ ಉದ್ಯಾನವನ ಉಳಿಯಬೇಕು. ಇರುವ ಗಿಡ ಮರಗಳನ್ನು ಯಾರು ತೆಗೆಯಬಾರದು ಎಂದು ಪಾರ್ಕ್ ಹಿತಾರಕ್ಷಣಾ ವೇದಿಕೆಯಿಂದ ಪ್ರತಿಭಟನೆಗಳು ನಡೆದಿದೆ. ಈ ವೇಳೆ ಜೆಡಿಎಸ್ ಪಕ್ಷದವತಿಯಿಂದ ನಾವು ಕೂಡ ಬೆಂಬಲ ಸೂಚಿಸಲಾಗಿತ್ತು. ಆದರೇ ಯಾರ ಮಾತು ಕೇಳದೇ ಕಾಮಗಾರಿ ನಡೆದಿದೆ. ಈ ವೇಳೆ ನಾನು ರಾಜಕಾರಣ ಮಾಡಲು ಹೋಗುವುದಿಲ್ಲ ಎಂದ ಅವರು, ನಾನು ಶಾಸಕನಾಗಿರು ಸಂದರ್ಭದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಕಾಂಕ್ರಿಟ್ ಕರಣದ ಕೆಲಸ ನಿಲ್ಲಿಸಬೇಕು. ಎಲ್ಲಾ ಹಿರಿಯರು ಮತ್ತು ಮಹಾರಾಜ ಪಾರ್ಕ್ ಹಿತಾರಕ್ಷಣಾ ವೇದಿಕೆಯವರ ಸಲಹೆಯಂತೆ ಅಧಿಕಾರಿಗಳು, ಇಂಜಿನಿಯರ್ ಅವರನ್ನು ಕರೆಯಿಸಿ ಯಾವುದು ಕೆಲಸ ಅವಶ್ಯಕತೆ ಇದೆ ಆ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. ನಮ್ಮ ತಂದೆಯವರಾದ ದಿವಂಗತ ಹೆಚ್.ಎಸ್. ಪ್ರಕಾಶ್ ಅವರು ಶಾಸಕರಾದ ವೇಳೆ ಮಹಾರಾಜ ಪಾರ್ಕಿನಲ್ಲಿ ಜಿಮ್ ಮತ್ತು ಯೋಗಾಸನಕ್ಕಾಗಿ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ಮತ್ತೆ ಇದರ ಮೇಲೆ ಎರಡು ಕೊಠಡಿ ಕೇಳಲಾಗಿದ್ದು, ಯಾವುದೇ ಕೆಲಸ ಇದ್ರು ನಾನು ಪ್ರಮಾಣಿಕವಾಗಿ ಪಕ್ಷದವತಿಯಿಂದ, ನಗರಸಭೆ ಸದಸ್ಯರ ಜೊತೆ ಒಗ್ಗಟ್ಟಿನಿಂಡ ನಿರ್ವಹಿಸಲಾಗುವುದು. ಜನರ ಸೇವೆ ಎಂದರೇ ಜನಾರ್ಧನ ಸೇವೆ ಎಂದು ಭಾವಸಿ ಶಾಸಕನ ಕೆಲಸ ಮಾಡಲಾಗುವುದು. ಶಾಸಕನಾಗಿ ನನ್ನ ಮೇಲೆ ಹೆಚ್ಚಿನ ಜವಬ್ಧಾರಿ ಇರುವುದಕ್ಕೆ ಎಲ್ಲೊ ಒಂದು ಕಡೆ ಭಯವಿದೆ. ಕೈಲಾದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಂಜೀವಿನಿ ಸಹಕಾರಿ ಆಸ್ಪತ್ರೆಯ ಮೂಲಕವು ಕೂಡ ನಾವು ಸೇವೆ ಮಾಡಲಾಗುವುದು. ಜೂನ್ ೫ ರಿಮದ ಪರಿಸರ ದಿನಾಚರಣೆ ಇದ್ದು, ಗಿಡ ನೆಡುವ ಮೂಲಕ ಉತ್ತಮ ಪರಿಸರಕ್ಕೆ ಕೈಜೋಡಿಸಲಾಗುವುದು. ಇಲ್ಲಿ ಔಷಧಿ ಗಿಡಗಳನ್ನು ನೆಡಲಾಗುವುದು ಎಂದು ಹೇಳಿದರು. ನಮ್ಮ ತಂದೆಯವರ ಜೊತೆ ಇಲ್ಲಿನ ಅನೇಕರು ಉತ್ತಮವಾದ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡು ನನ್ನನ್ನು ಶಾಸಕನಾಗಲು ಸಹಕರಿಸಿದ್ದು, ಮುಂದೆ ನಮ್ಮ ಮಕ್ಕಳಿಗೂ ಕೂಡ ನಿಮ್ಮ ಸಹಕಾರ ಇರಲಿ ಎಂದು ಕೇಳುತ್ತೇನೆ ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ ಮಾತನಾಡಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಹೊಸ ಬಸ್ ನಿಲ್ದಾಣದ ಬಳಿ ಇರುವ ಜಾಗದಲ್ಲಿ ಉತ್ತಮವಾದ ಉದ್ಯಾನವನ ಮಾಡುವ ನಿಟ್ಟಿನಲ್ಲಿ ೧೪೪ ಕೋಟಿ ರೂಗಳ ಹಣ ತಂದಿದನ್ನು ಮಾಜಿ ಶಾಸಕರಾದ ಪ್ರೀತಂ ಗೌಡರು ಹಣವನ್ನು ಭಾಗ ಮಾಡಿ ಪಾರ್ಕ್, ಮಸಾಣ ಕೆರೆಕಟ್ಟೆ ಅಭಿವೃದ್ಧಿ ಮಾಡಲು ಮುಂದಾದರು. ಮಹಾರಾಜ ಪಾರ್ಕಿಗೆ ೧೪ ಕೋಟಿ ೮೭ ಲಕ್ಷ ಹಣದಲ್ಲಿ ಅಭಿವೃದ್ಧಿ ಮಾಡಲು ಹೊರಟರು. ಮಹಾರಾಜ ಪಾರ್ಕಿನಲ್ಲಿ ಕಾಂಕ್ರಿಟ್ ಕರಣ ಹೆಚ್ಚಾಗುತ್ತಿದೆ ಎಂದು ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮತ್ತು ವಾಯು ವಿಹಾರಕ್ಕೆ ಬರುವರ ಜೊತೆ ಹಿತಾರಕ್ಷಣೆ ರಚಿಸಿಕೊಂಡು ಪ್ರತಿಭಟನೆ ಮಾಡಿ ಈಗಿನ ಹಾಲಿ ಶಾಸಕರ ಮುಖಂಡತ್ವದಲ್ಲಿ ಒಂದು ಅಭಿಪ್ರಾಯ ತಿಳಿಸಲಾಯಿತು ಎಂದರು. ಆದರೇ ಇದರ ವಿರುದ್ಧವಾಗಿಯೇ ಈ ಪಾರ್ಕಿನಲ್ಲಿ ಕೆಲಸ ನಡೆಯುತ್ತಿದೆ. ಈ ವೇಳೆ ಕಾಟಚಾರಕ್ಕೆ ಒಂದು ಸಭೆ ಮಾಡಿ ಜೊತೆಯಲ್ಲಿ ಅವರ ನೂರಾರು ಜನ ಹಿಂಬಾಲಕರನ್ನು ಕರೆತಂದು ದೂಳು ಎಬ್ಬಿಸಿ ಹೋದರು. ಹಿಂದೆ ಏನು ನಡೆದಿದೆ ಎಂಬುದು ನಮಗೆ ಬೇಕಿಲ್ಲ. ಮುಂದೆ ಏನು ಮಾಡಬೇಕು ಎಂಬುದು ಮುಖ್ಯ ಎಂದು ಅಭಿಪ್ರಾಯಪಟ್ಟರು. ಮಹಾರಾಜ ಪಾರ್ಕ್ ಒಟ್ಟು ವಿಸ್ತಿರ್ಣ ೧೪ ಎಕರೆ ಇದ್ದು, ಒತ್ತುವರಿ ಎಲ್ಲಾ ಕಳೆದ ಎಂಟತ್ತು ಎಕರೆ ಭೂಮಿ ಇರಬಹುದು. ಪಾರ್ಕಿನ ೧೪ ಕೋಟಿಯಲ್ಲಿ ಎಷ್ಟು ಕೆಲಸ ಆಗಿದೆ ಬಗ್ಗೆ ತಿಳಿಯಬೇಕಾಗಿದೆ. ಇಲ್ಲಿ ಗಜೀಬು ಎಲ್ಲಾ ಮಾಡಲಾಗಿದ್ದು, ಈ ಜಾಗದಲ್ಲಿ ಅವ್ಯವಹಾರಗಳೆಲ್ಲಾ ಪ್ರತಿನಿತ್ಯ ನಡೆಯುತ್ತಿದ್ದು, ಅವರನ್ನು ಇಲ್ಲಿಂದ ಓಡಿಸುವುದೇ ಕೆಲಸ ಆಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಈ ಪಾರ್ಕ್‌ನಲ್ಲಿ ಎಲ್ಲಿ ಹೋದರೂ ಶೌಚಾಲಯವೇ ಕಾಣುತ್ತಿದ್ದು, ೫ ಶೌಚಾಲಯ ಮಾಡಿದ್ದು, ಸಾರ್ವಜನಿಕರ ಅನುಕೂಲಕ್ಕೆ ಏನು ಮಾಡಬೇಕು ಬಗ್ಗೆ ಚರ್ಚೆ ಮಾಡಿ ಶಾಸಕರು ತಮ್ಮ ತಂದೆಯಂತೆ ಅಭಿವೃದ್ಧಿ ಕೆಲಸ ಮಾಡಲಿ ಎಂದು ಹಾರೈಸಿದರು.

ನಗರಸಭೆ ಸದಸ್ಯ ಕ್ರಾಂತ್ರಿ ಪ್ರಸಾದ್ ತ್ಯಾಗಿ ಮಾತನಾಡಿ, ಮಹಾರಾಜ ಪಾರ್ಕಿನಲ್ಲಿ ಕಾಂಕ್ರಿಟ್ ಕರಣ ಬೇಡ ಎಂದರೂ ಸಾರ್ವಜನಿಕರ ವಿರುದ್ಧವಾಗಿ ಕಾಮಗಾರಿಯನ್ನು ಹಿಂದಿನ ಶಾಸಕರು ನಡೆಸಿದ್ದಾರೆ. ಜನರ ಒಳಿತಿಗಾಗಿ ಕೆಲಸ ಮಾಡದೇ ಹಾಸನ ಜನರ ವಿರುದ್ಧವಾಗಿ ಕೆಲ ಕಾಂಕ್ರೀಟ್ ಕರಣ ಮಾಡಿದರು. ಕೆಲ ಕಾಮಗಾರಿ ಅನವಶ್ಯಕವಾಗಿದ್ದು, ಈಗಿನ ಶಾಸಕರು ಮುತುವರ್ಜಿವಹಿಸಿ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದರು.

ಇದೆ ವೇಳೆ ಮಹಾರಾಜ ಪಾರ್ಕ್ ಒಳಗೆ ತರಬೇತಿ ಪಡೆದು ಸಾಧನೆ ಮಾಡಿದ ಸಂತೋಷ್ ಶೆಟ್ಟಿ ಮತ್ತು ಸಿಂಚನಾ ಅವರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಸತೀಶ್, ಜೆಡಿಎಸ್ ಮುಖಂಡರಾದ ಗಿರಿಗೌಡ, ಯೋಗಾ ಶಿಕ್ಷಕ ಮನೋಹರ್, ಗಿಡ್ಡೇಗೌಡ, ಜೆಡಿಎಸ್ ಮುಖಂಡರಾದ ಕಮಲ್ ಕುಮಾರ್, ಪಯಾಸ್, ನಗರಸಭೆ ಸದಸ್ಯರಾದ ಸಯ್ಯಾದ್ ಅಕ್ಬರ್, ರಫೀಕ್, ನವೀನ್, ಮಂಜುನಾಥ್, ಚಂದ್ರೇಗೌಡ, ಮಹೇಶ್, ಕೆ.ಎಸ್.ಎನ್. ಮೂರ್ತಿ, ಕೈಲಾಸ್ ಶಂಕರ್, ನಿರಂಜನ್ ರಾಜ್, ಹನುಮಂತೇಗೌಡ, ಅಶ್ವಥ್, ಭಾನುಮತಿ ಇತರರು ಉಪಸ್ಥಿತರಿದ್ದರು.

ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಶಿವರಾಜಕುಮಾರ್ ಅಭಿನಯದ “ಭೈರತಿ ರಣಗಲ್” ಚಿತ್ರಕ್ಕೆ ಚಾಲನೆ .

ವಿದೇಶದಲ್ಲಿ ವ್ಯಾಸಂಗ ಮಾಡಬೇಕೇ..? ಉದ್ಯೋಗ ಪಡೆಯಬೇಕೇ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

100 ವರ್ಷದ ಅಜ್ಜಿಯ ವಿರುದ್ಧ FIR ದಾಖಲು: ಅಂಥಾದ್ದೇನು ಮಾಡಿದ್ರು ಈ ಅಜ್ಜಿ..?

- Advertisement -

Latest Posts

Don't Miss