Monday, October 2, 2023

Latest Posts

100 ವರ್ಷದ ಅಜ್ಜಿಯ ವಿರುದ್ಧ FIR ದಾಖಲು: ಅಂಥಾದ್ದೇನು ಮಾಡಿದ್ರು ಈ ಅಜ್ಜಿ..?

- Advertisement -

ಕಾನ್ಪುರ್: ಸರಿಯಾಗಿ ಕಣ್ಣು ಕಾಣದ, ನಡೆದಾಡಲು ಬಾರದ 100 ವರ್ಷದ ಅಜ್ಜಯೊಬ್ಬಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಚಂದ್ರಕಾಳಿ ದೇವಿ (100) ಎಂಬ ವೃದ್ಧೆಯ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಕಾರಣವೇನಂದ್ರೆ, ಈಕೆ ಒಬ್ಬರ ಜಾಗದ ಮಾಲೀಕರಿಗೆ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟು, ಬೆದರಿಸಿದ್ದಾಳೆ. ಹಾಗಾಗಿ ಮಾಧುರಿ ಎಂಬ ಮಹಿಳೆ ಈಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಮಾಧುರಿ ಎಂಬ ಮಹಿಳೆ ತಮ್ಮ ಹೆಸರಿನಲ್ಲಿ ಕಾನ್ಪುರದಲ್ಲಿ ಜಾಗವೊಂದನ್ನು ಖರೀದಿಸಿದ್ದರು. ಆಕೆ ಯಾರಿಂದ ಜಾಗವನ್ನು ಖರೀದಿಸಿದ್ದರೋ, ಅವರು ಈ ಚಂದ್ರಕಾಳಿಯ ಮಕ್ಕಳಂತೆ. ಅವರು ನಕಲಿ ಜಾಗದ ಪತ್‌ರ ಸೃಷ್ಟಿಸಿ, ಮಾರಾಟ ಮಾಡಿದ್ದಾರೆ. ಹಾಗಾಗಿ ಈ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣವಾಾಗಬಾರದು. ಈ ಜಾಗ ನನ್ನ ಹೆಸರಲ್ಲಿದೆ. ಹಾಗೇನಾದರೂ ನಿಮಗೆ ಕಟ್ಟಡ ಕಟ್ಟಬೇಕು ಎಂದಲ್ಲಿ, 10 ಲಕ್ಷ ರೂಪಾಯಿ ಕೊಡಿ ಎಂದು ಬೇಡಿಕೆ ಇಟ್ಟಿದ್ದಾಳೆ.

ಆದರೆ ಮಾಧುರಿ ತಾವು 10 ಲಕ್ಷ ರೂಪಾಯಿ ಕೊಡಲಾಗುವುದಿಲ್ಲ. ಎಷ್ಟು ಹಣ ಕೊಡಬೇಕೋ, ಅಷ್ಟು ಹಣವನ್ನು ತನಗೆ ಜಾಗ ಮಾರಾಟ ಮಾಡಿದವರಿಗೆ ಕೊಟ್ಟಿದ್ದೇನೆ ಎಂದಿದ್ದಾರೆ. ಹಾಗಾಗಿ ಚಂದ್ರಕಾಳಿ, ಕೆಲ ಜನರನ್ನ ಕಳುಹಿಸಿ, ಹಲ್ಲೆಗೂ ಯತ್ನಿಸಿದ್ದಾಳೆ. ಅಲ್ಲದೇ, ಬೆದರಿಕೆ ಕರೆಗಳನ್ನು ಮಾಡಿದ್ದಾಳೆಂದು ದೂರುದಾರರು ಆರೋಪಿಸಿದ್ದಾರೆ.

ಅಲ್ಲದೇ, ಈಕೆ ವಾಸಿಸುತ್ತಿರುವ ಜಾಗದ ಬಳಿ, ಯಾರಾದರೂ ಜಾಗ ಖರೀದಿಸಿದರೂ, ಅಂಥವರು ಈಕೆಗೆ 5ರಿಂದ 10 ಲಕ್ಷ ರೂಪಾಯಿ ಕೊಡಲೇಬೇಕೆಂದು, ಒತ್ತಾಯಿಸುತ್ತಿದ್ದಳಂತೆ. ಇಲ್ಲವಾದಲ್ಲಿ, ಜನರನ್ನು ಕಳುಹಿಸಿ, ಹಲ್ಲೆ ಮಾಡಿಸುತ್ತಿದ್ದಳಂತೆ. ಈ ರೀತಿ ಹಲವರು ಈಕೆಯ ಮೇಲೆ ಆರೋಪ ಮಾಡಿದ್ದಾರೆ. ಹಾಗಾಗಿ ಈಕೆಯ ವಿರುದ್ಧ ದೂರು ದಾಖಲಾಗಿದ್ದು, ಈಕೆ ವಿಚಾರಣೆಗೂ ಹಾಜರಾಗಿದ್ದಾರೆ.

ಚಾಲಕರ ಸಮಸ್ಯೆ ಆಲಿಸುತ್ತ, ಟ್ರಕ್‌ನಲ್ಲಿ ಸಂಚರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ..

“ಕೊರಗಜ್ಜ” ಚಿತ್ರಕ್ಕೆ ಸ್ವತಃ ಕನ್ನಡದಲ್ಲಿಯೇ ಡಬ್ಬಿಂಗ್ ಮಾಡಿದ ಬಾಲಿವುಡ್ ನಟ “ಕಬೀರ್ ಬೇಡಿ”

ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿಯ ದುರ್ಮರಣ..

- Advertisement -

Latest Posts

Don't Miss