Hassan News: ಸಮಸ್ಯೆನ್ನಿಟ್ಟುಕೊಂಡು ಸಾರ್ವಜನಿಕರು ಯಾರಾದರೂ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಪೊಲೀಸ್ ಅಧಿಕಾರಿಗಳು ಇಲ್ಲವೇ ಸಿಬ್ಬಂದಿಗಳು ಸ್ಪಂದಿಸದಿದ್ದರೇ ಇಲ್ಲವೇ ದೂರು ಸ್ವೀಕರಿಸದೇ ವಿಳಂಬ ಮಾಡಿದೇ ಸುಮ್ಮನೆ ಕೂರಬೇಡಿ. ನಿಮ್ಮ ದೂರನ್ನು ನಮಗೆ ತಲುಪಿಸಲು 08122265೦೦೦ ಕರೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ತಮ್ಮ ಕಛೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಮೊದಲು ದೂರುಗಳಿಗೆ ಸ್ಪಂದಿಸುವ ದೂರವಾಣಿ ಸಂಖ್ಯೆ ಇರುವ ಪೋಸ್ಟರ್ ನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿ, ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ ಅನೇಕ ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿಲ್ಲ ಮತ್ತು ವಿವಿಧ ದೂರು ದಾಖಲಿಸಲು ವಿಳಂಬ ಮಾಡಲಾಗುತ್ತಿದೆ ಎಂಬ ದೂರಿದೆ. ಇದು ಮತ್ತೆ ಮರುಕಳಿಸಿದರೇ 08172 265000ಕರೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸಾರ್ವಜನಿಕರು ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಸಾರ್ವಜನಿಕರು ಯಾರಾದರೂ ಪೊಲೀಸ್ ಠಾಣೆಗೆ ಬಂದರೆ ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಹೋದರೆ, ದೂರು ತೆಗೆದುಕೊಳ್ಳಲು ವಿಳಂಬ ಮಾಡಿದರೆ, ನಿಮ್ಮೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸದೇ ಇದ್ದರೆ ಈ ಸಂಖ್ಯೆಗೆ ಕರೆ ಮಾಡಿದರೆ ಕಂಟ್ರೋಲ್‌ನಿಂದ ನನಗೆ ಮಾಹಿತಿ ಬರಲಿದೆ. ನಂತರ ತುರ್ತು ಕ್ರಮಕ್ಕೆ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ದೂರು ಹೇಳುವ ಹೊಸ ನಂಬರ್‌ನ್ನು ಎಸ್ಪಿ ಅವರು ಲಾಂಚ್ ಮಾಡಿದರು. ಈ ವೇಳೆ ಡಿಎಸ್‌ಬಿ ಇನ್ಸ್‌ಪೆಕ್ಟರ್ ಅರುಣ್ ಇತರರು ಉಪಸ್ಥಿತರಿದ್ದರು.
ಶಾಸಕರ ಮನೆ ಹತ್ತಿರವೇ ಕುಡುಕರ ಅಡ್ಡೆ: ಸಿಎಲ್-7 ವಿರುದ್ಧ ಗುಡುಗಿದ ಶಾಸಕ ಸ್ವರೂಪ್