Thursday, October 30, 2025

Latest Posts

‘ಬ್ರ್ಯಾಂಡ್ ಬೆಂಗಳೂರು, ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣವೇ ನಮ್ಮ ಧ್ಯೇಯ’

- Advertisement -

Political News: ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣಕ್ಕೆ ಸಭೆ ನಡೆಸಲಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು.

ಈ ಬಗ್ಗೆ ಮಾಧ್ಯಮದವರ ಬಳಿ ಮಾತನಾಡಿರುವ ಡಿಸಿಎಂ ಡಿಕೆಶಿ, ಮುಂದಿನ ವಾರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಭೆ ನಡೆಸಲಿದ್ದೇವೆ. ಒಂದು ವೆಬ್‌ಸೈಟ್ ಕ್ರಿಯೇಟ್ ಮಾಡಿ, ಸಾರ್ವಜನಿಕರಿಂದಲೂ ಸಲಹೆ ಪಡೆಯಲಿದ್ದೇವೆ. ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು, ಹಲವು ಅಧಿಕಾರಿಗಳು ಕೂಡ ಸಾಥ್ ನೀಡಲಿದ್ದಾರೆಂದು ಹೇಳಿದರು.

ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಡಿಕೆಶಿ, ಬೆಂಗಳೂರಿನ ವೈಭವವನ್ನು ಮರಳಿ ತರುವ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣ ಮಾಡುವುದೇ ನಮ್ಮ ಧ್ಯೇಯ ಎಂದು ಬರೆದುಕೊಂಡಿದ್ದಾರೆ.

‘ಅಕ್ಕಿ ಕೊಡುವುದಕ್ಕೆ ಯೋಗ್ಯತೆ ಇಲ್ಲವಾದರೆ ಅಂತಹ ಭರವಸೆಗಳನ್ನು ಯಾಕೆ ಕೊಟ್ಟಿದ್ದಿರಿ..?’

ವ್ಹೀಲ್ ಚೇರ್ ಇಲ್ಲದ್ದಕ್ಕೆ, ಸ್ಕೂಟಿಯಲ್ಲೇ ಆಸ್ಪತ್ರೆಯ ಲಿಫ್ಟ್ ಏರಿ ಹೋದ ವ್ಯಕ್ತಿ : ವೀಡಿಯೋ ವೈರಲ್

ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು, ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ

- Advertisement -

Latest Posts

Don't Miss