Wednesday, September 11, 2024

Latest Posts

ವ್ಹೀಲ್ ಚೇರ್ ಇಲ್ಲದ್ದಕ್ಕೆ, ಸ್ಕೂಟಿಯಲ್ಲೇ ಆಸ್ಪತ್ರೆಯ ಲಿಫ್ಟ್ ಏರಿ ಹೋದ ವ್ಯಕ್ತಿ : ವೀಡಿಯೋ ವೈರಲ್

- Advertisement -

National News: ಜೈಪುರ್: ನೀವು ತ್ರೀ ಈಡಿಯಟ್ಸ್ ಸಿನಿಮಾ ನೋಡಿದಿದ್ರೆ, ಅದರಲ್ಲಿ ಒಂದು ದೃಶ್ಯವಿದೆ. ತನ್ನ ಗೆಳೆಯನ ತಂದೆಗೆ ಆರೋಗ್ಯ ಹದಗೆಟ್ಟಾಗ ಆ್ಯಂಬುಲೆನ್ಸ್‌ಗೆ ಕಾಯದೇ, ನಟ ತನ್ನ ಸ್ಕೂಟಿಯಲ್ಲೇ ಅವರನ್ನು ಆಸ್ಪತ್ರೆಗೆ ಕರೆತರುತ್ತಾನೆ.

ರಾಜಸ್ಥಾನದ ಆಸ್ಪತ್ರೆಯೊಂದರಲ್ಲಿ ಇಂಥದ್ದೇ ಘಟನೆ ನಡೆದಿದೆ. ವೀಲ್ ಚೇರ್‌ ಸಮಸ್ಯೆ ಇದ್ದ ಕಾರಣ ವ್ಯಕ್ತಿಯೋರ್ವ ಗಾಯಾಳುವನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ಕರೆತಂದು, ಲಿಫ್ಟ್‌ ಮೂಲಕ ಮೂರನೇ ಅಂತಸ್ತಿಗೆ ಕರೆದೊಯ್ದಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೋರ್ವ, ಅಪಘಾತದಲ್ಲಿ ಗಾಯಗೊಂಡಿದ್ದ ಇನ್ನೋರ್ವ ವ್ಯಕ್ತಿಯನ್ನು ಸ್ಕೂಟಿಗೆ ಹತ್ತಿಸಿಕೊಂಡು, ಚಿಕಿತ್ಸೆ ಕೊಡಿಸುವುದಕ್ಕಾಗಿ ಆಸ್ಪತ್ರೆಗೆ ಕರೆತಂದಿದ್ದಾನೆ. ಆದರೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ವೀಲ್ಹ್ ಚೇರ್ ಮತ್ತು ಸ್ಟ್ರೇಚರ್‌ಗಳ ಕೊರತೆ ಇದ್ದ ಕಾರಣ. ಆಸ್ಪತ್ರೆಯ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು, ಸ್ಕೂಟಿಯ ಮೂಲಕವೇ, ಲಿಫ್ಟ್ ಏರಿ ಮೂರನೇ ಫ್ಲೋರ್‌ಗೆ ಕರೆದೊಯ್ದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ವ್ಯಕ್ತಿಯ ಕೆಲಸವನ್ನ ಸಮರ್ಥಿಸಿಕೊಂಡಿದ್ದಾರೆ.

‘ಅಕ್ಕಿ ಕೊಡುವುದಕ್ಕೆ ಯೋಗ್ಯತೆ ಇಲ್ಲವಾದರೆ ಅಂತಹ ಭರವಸೆಗಳನ್ನು ಯಾಕೆ ಕೊಟ್ಟಿದ್ದಿರಿ..?’

ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು, ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯ ಪೂರ್ವಭಾವಿ ಸಭೆ

- Advertisement -

Latest Posts

Don't Miss