ಯೂಸ್ ಲೆಸ್ ಫೆಲೋ ಇದೆಲ್ಲಾ ಇಟ್ಕೊಬೇಡ: ನಗರಸಭೆ ಆಯುಕ್ತರ ವಿರುದ್ಧ ಸಚಿವ ರಾಜಣ್ಣ ಗರಂ

Hassan News: ಹಾಸನ : ಸಭೆಗೆ ತಡವಾಗಿ ಬಂದ ನಗರಸಭೆ ಆಯುಕ್ತರಿಗೆ ಸಚಿವರು ಕ್ಲಾಸ್ ತೆಗೆದುಕೊಂಡ ಘಟನೆ Hassanದಲ್ಲಿ ನಡೆದಿದೆ. ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಆಯೋಜನೆಗೊಂಡಿದ್ದ ಕೆಂಪೇಗೌಡ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿತ್ತು. ಈ ಸಭೆಗೆ ನಗರಸಭೆ ಆಯುಕ್ತರು ತಡವಾಗಿ ಬಂದರು. ಈ ವೇಳೆ ಮಿನಿಸ್ಟರ್ ರಾಜಣ್ಣ, ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಾರ್ಯಕ್ರಮದ ವೇಳೆ ಸ್ವಚ್ಛತೆ ಕಾಪಾಡಬೇಕು ನಗರಸಭೆ ಆಯುಕ್ತರು ಎಲ್ಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ. ಈ ವೇಳೆ ನಗರಸಭೆ ಆಯುಕ್ತ ಸತೀಶ್ ಹಾಜರಾಗಿರಲಿಲ್ಲ. ಅವರು ತಡವಾಗಿ ಬಂದ ಕಾರಣ ರಾಜಣ್ಣ ಸಿಟ್ಟಾಗಿದ್ದಾರೆ.

ಸಭೆ ಬಗ್ಗೆ ಮೊದಲೇ ಹೇಳಿರಲಿಲ್ಲವಾ ನಿನಗೆ, ಬೇರೆ ಸಮಯದಲ್ಲಿ ಏನು ಮಾಡುತ್ತಿದ್ದೆ..? ಯೂಸ್ ಲೆಸ್ ಫೆಲೋ ಇದೆಲ್ಲಾ ಇಟ್ಕೊಬೇಡ. ಕಾರ್ಯಕ್ರಮದ ನಡೆಯುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಬೇಕು. ನಗರದ ಎಲ್ಲೆಡೆ ತೋರಣ ಕಟ್ಟಿಸಬೇಕು. ಆಹಾರ ನೀಡುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿ. ಇದೆಲ್ಲವನ್ನೂ ಮುತುವರ್ಜಿ ವಹಿಸಿ ನೀನೇ ಮಾಡಬೇಕು. ನೀನು ಇನ್ನೊಬ್ಬ ಯಾವನಿಗಾದ್ರು ಹೇಳೋದು, ಅವನು ಮಾಡಲಿಲ್ಲ ಅಂತ ಹೇಳೋದು ಇವೆಲ್ಲಾ ಇಟ್ಕೊಬೇಡ, ನೀನೇ ಜವಾಬ್ದಾರಿ ಎಂದು ರಾಜಣ್ಣ ಗರಂ ಆಗಿ ಹೇಳಿದ್ದಾರೆ.

ಆಟೋ ಚಾಲಕರಿಗೆ ವಿಷದ ಭಾಗ್ಯ ನೀಡಿ: ಚಾಲಕನ ಕಣ್ಣೀರ ಕಹಾನಿ..

ನಿರ್ವಾಹಕಿಯನ್ನ ಅಸಹ್ಯವಾಗಿ ನಿಂದಿಸಿದ ವೃದ್ಧೆ: ಬಸ್‌ನಲ್ಲಿಯೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ ನಿರ್ವಾಹಕಿ

‘ಮೊದಲು ಸುಳ್ಳು ಸುದ್ದಿ ಹಬ್ಬಿಸಿರುವ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು’

About The Author