Hassan News: ಹಾಸನ: ಹಾಸನ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗಾಗಿ ಸಂಪೂರ್ಣವಾಗಿ ಶಿರಾಡಿಘಾಟ್ ರಸ್ತೆ ಬಂದ್ ಮಾಡಲು ಆಗಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.
ಸಕಲೇಶಪುರ ತಾಲೂಕಿನ, ದೋಣಿಗಾಲ್ ಬಳಿ ಭೂಕುಸಿತ ಪ್ರದೇಶಕ್ಕೆ ಎನ್‌ಎಚ್ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಕಾಮಗಾರಿಗಾಗಿ ಸಂಪೂರ್ಣವಾಗಿ ಶಿರಾಡಿಘಾಟ್ ರಸ್ತೆ ಬಂದ್ ಮಾಡಲು ಆಗಲ್ಲ. ಇದುಬೆಂಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ.
ಒನ್ ವೇ ಮಾಡಲಿಕ್ಕೆ, ಒಂದು ಕಡೆ ವಾಹನ ಓಡಾಡಲು ಅವಕಾಶ ನೀಡಲು ಚಿಂತನೆ ಮಾಡಿದ್ದೇವೆ, ಸಂಪೂರ್ಣವಾಗಿ ಬಂದ್ ಮಾಡುವುದು ಕಷ್ಟ. ಒನ್ ವೇ ಮಾಡಿ ಒಂದು ಕಡೆ ಬಿಡೋದು, ಒಂದು ಕಡೆ ವಾಹನ ವಾಪಾಸ್ ಹೋಗುವ ವ್ಯವಸ್ಥೆ ಪ್ರಯತ್ನ ಮಾಡ್ತಿವಿ ಎಂದರು.
ಹಿಂದಿನ ಗುತ್ತಿಗೆದಾರರೇ ಬಂದಿದ್ದಾರೆ, ಅವರ ಕಡೆಯಿಂದಲೇ ಕಾಮಗಾರಿ ಮಾಡುಸ್ತಿವಿ, ಪ್ರತಿ ತಿಂಗಳು ಕೆಲಸ ಮಾನಿಟರ್ ಮಾಡುತ್ತೇವೆ. ಸಂಪೂರ್ಣ ಬಂದ್ ಮಾಡಿದ್ರೆ ಬಹಳ ಕಷ್ಟ ಆಗ್ತದೆ, ಒನ್ ವೇ ಮಾಡ್ತಿವಿ ಎಂದು ಸ್ಪಷ್ಟಪಡಿಸಿದರು.
ನಮ್ಮ ರಾಜ್ಯದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆ ಇದಾಗಿದ್ದು, 2017 ರಿಂದ ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಹೆಚ್ಚು, ಕಡಿಮೆ ಎರಡು-ಮೂರು ವರ್ಷದ ಹಿಂದೆಯೇ ಕಾಮಗಾರಿ ಮುಗಿಯಬೇಕಿತ್ತು. ತಾಂತ್ರಿಕ ತೊಂದರೆಯಿಂದ ಮುಗಿಸಲು ಆಗಿಲ್ಲ.
ನಾನು ಲೋಕೋಪಯೋಗಿ ಮಂತ್ರಿ ಆದ ಮೇಲೆ ಅಧಿಕಾರಿಗಳ ಸಭೆ ಮಾಡುವಾಗ ಈ ಸಮಸ್ಯೆ ಗಮನಕ್ಕೆ ಬಂದಿತ್ತು. ಖುದ್ದು ವೀಕ್ಷಣೆ ಮಾಡಿ ಸ್ಥಳದಲ್ಲೇ ಪರಿಹಾರ ಮಾಡಲು ಬಂದಿದ್ದೇನೆ ಎಂದರು.
ಹಾಸನದಿಂದ ಸಕಲೇಶಪುರ ಬೈಪಾಸ್‌ವರೆಗೆ ನ.1 ರೊಳಗೆ ಕಾಮಗಾರಿ ಮುಗಿಸಲು ಸಮಯ ನೀಡಿದ್ದೇವೆ. ಮುಂದಿನ ಕಾಮಗಾರಿ ಮುಗಿಸಲು ಮುಂದಿನ ವರ್ಷ ಮಾ.24 ರವರೆಗೆ ಸಮಯ ಕೇಳಿದ್ದಾರೆ. ಸಂಪೂರ್ಣ ಕಾಮಗಾರಿ ಮಾಡಲು ಸಮಯ ಕೇಳಿದ್ದಾರೆ. ನಾವು ಪ್ರತಿ ತಿಂಗಳು ಮಾನಿಟರ್ ಮಾಡ್ತಿವಿ. ಸ್ಥಳದಲ್ಲೇ ಇರಬಹುದು ಅಥವಾ ಬೆಂಗಳೂರಿನಲ್ಲಿ ಸಭೆ ಮಾಡಿ ಮಾನಿಟರ್ ಮಾಡುತ್ತೇವೆ.
ಹಿಂದೆ ಏನಾಗಿದೆ ಅದನ್ನು ಕೇಳಲು ಹೋಗಲ್ಲ, ಮುಂದೆ ಏನು ಮಾಡಬೇಕು ಎಂಬುದು ನಮಗಿರುವ ಚಾಲೆಂಜ್, ನಮ್ಮ ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸುತ್ತೆ, ಜನರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂಬ ಭರವಸೆ ಇದೆ, ಖಂಡಿತವಾಗಿಯೂ ಮಾಡುತ್ತೇವೆ ಎಂದು ಹೇಳಿದರು.
ಎಲ್ಲಾ ಸರ್ಕಾರಗಳು ಇದ್ದ ವೇಳೆ ಕಾಮಗಾರಿ ಏಕೆ ವಿಳಂಬವಾಗಿದೆ ಗೊತ್ತಿಲ್ಲ. ಏಕೆ ಆಗಿದೆ ಎಂಬುದನ್ನು ಹುಡುಕುವ ಬದಲು ಮುಂದಿನ ಪರಿಹಾರ, ಎಷ್ಟು ಸಮಯದ ಅವಧಿಯಲ್ಲಿ ಕಾಮಗಾರಿ ಮುಗಿಸುತ್ತೇವೆ ಅನ್ನೋದು ಮುಖ್ಯ, ಎರಡು ಟೈಂ ಕೊಟ್ಟಿದ್ದೇವೆ ಒಂದು ನ.1, ಇನ್ನೊಂದು ಮಾ.24 ಕ್ಕೆ ಮುಗಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿವಿ ಎಂದು ವಿಶ್ವಾಸ
ವ್ಯಕ್ತಪಡಿಸಿದರು.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆಲಸ ವಿಳಂಬವಾಗಿದೆ. ಮಳೆಗಾಲದಲ್ಲಿ ಭೂಕುಸಿತವಾಗಿದೆ, ಅದಕ್ಕೆ ಕಡ್ಡಾಯವಾಗಿ ಎಲ್ಲಾ ಕಡೆ ರಿಟೈನಿಂಗ್ ವಾಲ್ ಮಾಡಬೇಕು ಅಂತ ಹೇಳಿದ್ದೀವಿ. ಎಲ್ಲೆಲ್ಲಿ ಬಹಳಷ್ಟು ಸಮಸ್ಯೆಯಿದೆ ಅಲ್ಲಲ್ಲಿ ಕಾಂಕ್ರಿಟ್ ವಾಲ್ ಕಟ್ಟಲು ಸೂಚನೆ ಕೊಟ್ಟಿದ್ದೇವೆ.
ಭೂಕುಸಿತದಿಂದ ನಷ್ಟ ಅನುಭವಿಸುವವರಿಗೆ ಪರಿಹಾರನೂ ಕೊಡ್ತಿವಿ, ರಿಟೈನಿಂಗ್ ವಾಲ್ ಕೂಡ ಕಟ್ಟುತ್ತೇವೆ. ಎಲ್ಲಾ ಕಡೆ ಹಂಡ್ರೆಡ್ ಪರ್ಸೆಂಟ್ ಮಾಡ್ತಿವಿ ಎಂದರು.
‘ಮೊದಲು ಸುಳ್ಳು ಸುದ್ದಿ ಹಬ್ಬಿಸಿರುವ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು’
ಅಧಿಕಾರಿಗಳು, ಗುತ್ತಿಗೆದಾರರ ಲಂಚಾವತಾರದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ನೌಕರರು
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್