Hassan News: ಹಾಸನ: ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರು ಅಟ್ಟಹಾಸ ಮೆರೆದಿದ್ದು, ವೀಲ್ಹಿಂಗ್ ಮಾಡುತ್ತಿದ್ದ ಕಿಡಿಗೇಡಿಗಳು ಹುಡುಗಿಯರು ಇದ್ದ ಗಾಡಿಗೆ ಗುದ್ದಿದ್ದಾರೆ. ಅಪಘಾತದಿಂದ ಇಬ್ಬರು ಯುವತಿಯರಿಗೆ ಗಂಭೀರವಾದ ಗಾಯವಾಗಿದ್ದು, ಭೂಮಿಕಾ ಸಿಂಚ ಎಂಬ ಯುವತಿಯರ ಸ್ಥಿತಿ ಗಂಭೀರವಾಗಿದೆ.
ಹಾಸನ ನಗರದ, ಸಾಲಗಾಮೆ ರಸ್ತೆಯ, ಕನ್ನಡ ಸಾಹಿತ್ಯ ಪರಿಷತ್ ಭವನದ ಎದುರು ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಭೂಮಿಕಾ ಮತ್ತು ಸಿಂಚನ ಆಗಷ್ಟೇ ಊಟ ಮುಗಿಸಿ, ಸ್ಕೂಟಿಯಲ್ಲಿ ಎಲ್ಲೋ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುಕೊಂಡು ಬರುತ್ತಿದ್ದ ಶಾಕೀರ್ ಮತ್ತು ಇನ್ನೋರ್ವ ಅಪ್ರಾಪ್ತ ಯುವಕ, ಈ ಯುವತಿಯರ ಗಾಡಿಗೆ ಗುದ್ದಿದ್ದಾನೆ.
ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಬೆಂಗಳೂರಿಗೆ ನಿಮಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತವಾದ ತಕ್ಷಣ, ಸ್ಥಳದಲ್ಲಿದ್ದ ಜನ ಶಾಕೀರ್ ಮತ್ತು ಅಪ್ರಾಪ್ತನಿಗೆ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ವೀಲ್ಹಿಂಗ್ ಮಾಡಿ ಅಪಘಾತ ಮಾಡಿದ ಶಾಕೀರ್ ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ಹಾಸನ ನಗರದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮಿತಿಮೀರಿದೆ. ಪುಂಡರ ಆಟೋಟಪಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.
ತಂದೆಯಿಂದಲೇ ಮಗಳ ಹತ್ಯೆ : ಸಾವಿನ ಸುದ್ದಿ ಕೇಳಿ ರೈಲಿಗೆ ಸಿಲುಕಿದ ಪ್ರೇಮಿ
ಹೊಂಚು ಹಾಕಿ ವೃದ್ಧೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ ಚೋರ