Wednesday, September 24, 2025

Latest Posts

ಲಂಡನ್ ನ ಬಸವಣ್ಣ ಪ್ರತಿಮೆಗೆ ಬಿಜೆಪಿ ನಾಯಕ ಸಚ್ಚಿದಾನಂದ ಮಾಲಾರ್ಪಣೆ

- Advertisement -

ಇಂಗ್ಲೆಂಡ್ : ಖಾಸಗಿ ಕಾರ್ಯಕ್ರಮ ನಿಮ್ಮಿತ್ತ ಇಂಗ್ಲೆಂಡ್ ಗೆ ತೆರಳಿರುವ ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಲಂಡನ್ ನ ಲ್ಯಾಂಬೆತ್ ನಗರದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ.

ಇಂಡುವಾಳು ಸಚ್ಚಿದಾನಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 42 ಸಾವಿರಕ್ಕೂ ಅಧಿಕ ಮತಗಳನ್ನ ಪಡೆಯುವ ಮೂಲಕ ಭಾರೀ ಪೈಪೋಟಿ ನೀಡಿದ್ರು. ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಒಂದು ಸ್ಥಾನ ಗಳಿಸದಿದ್ದರೂ ಮತಗಳಿಕೆಯಲ್ಲಿ ಏರಿಕೆ ಕಂಡಿತ್ತು.

ಅದರಲ್ಲೂ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಚ್ಚಿದಾನಂದ ಜಿಲ್ಲೆಯಲ್ಲೇ ಬಿಜೆಪಿ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಮುಂದಿನ ಬಾರಿ ವಿಧಾನಸಭೆ ಚುನಾವಣೆಯಲ್ಲಿ 100% ಗೆಲ್ಲುವ ವಿಶ್ವಾಸದಲ್ಲಿ ಸಚ್ಚಿದಾನಂದ ಇದ್ದಾರೆ. ಈ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಗೆ ಸಚ್ಚಿದಾನಂದ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗ್ತಿದೆ.

ಚುನಾವಣೆಯಲ್ಲಿ ಸೋತರೂ, ಕೊಟ್ಟ ಮಾತು ಉಳಿಸಿಕೊಂಡ ಮದ್ದೂರು ಬಿಜೆಪಿ ಅಭ್ಯರ್ಥಿ

‘ನೀವು ಸತ್ಯ ಹರಿಶ್ಚಂದ್ರರ ತುಂಡಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಆಯುಷ್ಯ ಇಲ್ಲ’

‘175 ರೂಪಾಯಿ ಜೊತೆಗೆ ಇನ್ನೂ175 ರೂಪಾಯಿ ಹಣ ಹಾಕ್ಬೇಕು’

- Advertisement -

Latest Posts

Don't Miss