ಕಾಡಾನೆ ದಾಳಿಯಿಂದ ಹೈರಾಣಾದ ಬೇಲೂರು ಜನ

ಬೇಲೂರು :ಹಾಸನ ಜಿಲ್ಲೆಯಲ್ಲಿ  ಕಾಡಾನೆಗಳ ದಾಂಧಲೆ ಶುರುವಾಗಿದ್ದು ಹೊಲದಲ್ಲಿ ಬೆಳೆದ ಬೆಳೆಗಳಾದ ಅಡಿಕೆ, ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿದ ಒಂಟಿಸಲಗ ರೈತರಿಗೆ ನಷ್ಟವನ್ನು ತರಿಸುತ್ತಿದೆ.

ಬೇಲೂರು ತಾಲ್ಲೂಕಿನ, ದೊಡ್ಡಸಾಲಾವರ ಗ್ರಾಮದಲ್ಲಿ  ಕಾಢಾನೆ ದಾಂದಲೆ ಹೆಚ್ಚಾಗಿದ್ದು. ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.ನಿನ್ನೆ ರಾತ್ರಿ ಮಾಜಿ ಜಿ.ಪಂ. ಸದಸ್ಯ ವೈ.ಎನ್.ಕೃಷ್ಣೇಗೌಡರ ಮನೆಯ ಸಮೀಪ ಬಂದಿರುವ ಆನೆ ಮನೆಯ ಹಿಂಬದಿ ತೋಟದಲ್ಲಿ ಬೆಳಿದಿದ್ದ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ.ಅಷ್ಟೆ ಅಲ್ಲದೆ ಮನೆಯ ಹಿಂದಿನ ಕೋಣೆಯಲ್ಲಿಟ್ಟಿದ್ದ ಬಾಳೆಗೋನೆಗಳನ್ನು ಹೊರ ಎಳೆದು ತಿಂದು ಹಾಕಿದೆ.

ಕಾಡಾನೆ ಕಂಡು ಕೃಷ್ಣೇಗೌಡ ಕುಟುಂಬಸ್ಥರು ಭಯಭೀತರಾಗಿದ್ದಾರೆ.ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕೃಷ್ಣೇಗೌಡರ ಮನೆಯ ಆವರಣದಲ್ಲೇ ಬೀಡುಬಿಟ್ಟಿತ್ತು ಕಾಡಾನೆ ದಾಳಿ ಮಾಡಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಕೃಷ್ಣೇ ಗೌಡರು ಒತ್ತಾಯಿಸಿದ್ದಾರೆ.

ಕಾಡಾನೆ ದಾಳಿಯಿಂದ ಹೈರಾಣಾಗಿರುವ ಮಲೆನಾಡು ಜನ ಇದರಿಂದ ಮುಕ್ತಿ ಯಾವಾಗ ಸಿಗುತ್ತದೆಂದು ಕಾಯುತ್ತಿದ್ದಾರೆ. ಆದರೆ ಇದಕ್ಕೆಲ್ಲ ಮುಕ್ತಿ ಸಿಗುವುದಾದರೂ ಯಾವಾಗ ಎಂಬುದು ಜನರ ಪ್ರಶ್ನೆ.

ಸಾಯಿಬಾಬ ದೇವಸ್ಥಾನದಲ್ಲಿ ಬಿಯರ್ ಬಾಟಲಿ ಹಿಡಿದ ಭಕ್ತರು

ಹುಟ್ಟು ಹಬ್ಬದ ಶುಭಾಶಯಗಳು ರಾಜ್ ಬಿ ಶೆಟ್ಟಿ

ಏನಿದು ಅಣುಗಳ ಉಸಿರಾಟ..?!

 

About The Author