Monday, April 21, 2025

Latest Posts

Rocking star yash:ರಾಕಿಂಗ್ ಸ್ಟಾರ್ ನ ಮಲೇಷಿಯಾ ಪ್ರವಾಸ

- Advertisement -

ಸಿನಿಮಾ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್ ಸಿನಿಮಾದ ನಂತರ ಇಲ್ಲಿಯವರೆಗೂ ಮುಂದಿನ ಸಿನಿಮಾದ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಆದರೆ ಅವರ ವಿದೇಶ ಪ್ರವಾಸ ವಿದೇಶದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವುದು. ಹಾಗೂ ಜಾಹಿರಾತುಗಳಲ್ಲಿ ನಟಿಸುವುದು ಬಿಟ್ಟರೆ ಸಿನಮಾದ ಬಗ್ಗೆ ತಿಳಿಸಿಲ್ಲ ಅದರೆ ಇದೀಗ ಅವರು ವಿಮಾನದಲ್ಲಿ ಮಲೆಷಿಯಾಕ್ಕೆ ಹಾರಿದ್ದಾರೆ.

ಮಲೇಷಿಯಾದಲ್ಲಿರುವ ಯುವ ಉಧ್ಯಮಿಯೊಬ್ಬರು ಚಿನ್ನದ ಅಂಗಡಿಯನ್ನು ತೆರೆದಿದ್ದು ಅದರ ಉದ್ಗಾಟನೆಗೆ ರಾಕಿಂಗ್ ಸ್ಟಾರ್ ಯಶ್ ರನ್ನು ವಿಶೇಷ ಅತಿಥಿಯನ್ನಾಗಿ ಕರೆಸಿದ್ದರು. ಯಶ್ ರನ್ನು ಬಹಳ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಪ್ರೈವೆಟ್ ಜೆಟ್ ನಲ್ಲಿ ಮಲೇಷಿಯಾಕ್ಕೆ ತೆರಳಿದ್ದಾರೆ.

ಯಶ್​ಗಾಗಿ ಹಲವು ಬಾಡಿಗಾರ್ಡ್​ಗಳನ್ನು ನೇಮಿಸಿ, ಹಲವು ಐಶಾರಾಮಿ ಕಪ್ಪು ಕಾರುಗಳನ್ನು ಬೆಂಗಾವಲು ಕಾರುಗಳನ್ನಾಗಿ ಇರಿಸಿ ಯಶ್ ಅನ್ನು ಕಪ್ಪು ಬಣ್ಣದ ಐಶಾರಾಮಿ ರಾಲ್ಸ್ ರಾಯ್ಸ್ ಲಿಮೋನಲ್ಲಿ ಹೋಟೆಲ್​ಗೆ ಕರೆತರಲಾಗಿದೆ. ಯಶ್​ರ ಮಲೇಷಿಯಾ ಎಂಟ್ರಿ ಕೊಟ್ಟು ಚಿನ್ನದ ಅಂಗಡಿಯನ್ನು ಉದ್ಘಾಟನೆ ಮಾಡಿದ್ದಾರೆ.

 

 

- Advertisement -

Latest Posts

Don't Miss