- Advertisement -
ಬೆಂಗಳೂರು: ಬೆಂಗಳೂರಿನ ಹೆಚ್ ಎಲ್ ನಲ್ಲಿ ಸೇನಾ ತರಬೇತಿ ವಿಮಾನವಾದ ವಿಟು ಕೆಬಿಎನ್ ವಿಮಾನ ಹೆಚ್ ಎ ಎಲ್ ನಿಂದ ಟೇಕಾಫ್ ಆಗಿ ಆಗಸದಲ್ಲಿ ಹಾರಾಟ ಮಾಡುತಿತ್ತು. ಹಾರಾಟ ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಮುಂದಿನ ಚಕ್ರದಲ್ಲಿ ದೋಷ ಕಂಡುಬಂದಿದೆ. ನಂತರ ಆತಂಕಗೊಂಡ ಪೈಲೆಟ್ ಗಳು ತುರ್ತು ಭೂಸ್ಪರ್ಶ ಮಾಡಿದ್ದಾರೆ.
ರನ್ ವೇ ನಿಂದ ಟೇಕ್ ಆಫ್ ಆದ ವಿಮಾನ ಕೆಲವು ನಿಮಿಷದಲ್ಲಿ ಚಕ್ರದಲ್ಲಿನ ತಾಂತ್ರಿಕ ದೋಷದಿಂದಾಗಿ ಕೇವಲ ಹಿಂಬದಿಯ ಎರಡು ಚಕ್ರದ ಸಹಾಯದಿಂದ ಸೇನಾ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಪೈಲೆಟ್ ಗಳು ಯಶಸ್ವಿಯಾಗಿದ್ದಾರೆ.
ದೋಷ ಕಂಡ ನಂತರ ಭಯಭಿತರಾಗಿರುವ ಎಚ್ ಎ ಎಲ್ ನ ಸಿಬ್ಬಂದಿಗಳು ತುಂಭಾ ಆತಂಕದಲ್ಲಿದ್ದರು ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ತಕ್ಷಣ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್
- Advertisement -