Monday, May 12, 2025

Latest Posts

Post office Scheme: 5 ಲಕ್ಷ ಇನ್ವೆಸ್ಟ್ ಮಾಡಿ, 15 ಲಕ್ಷದವರೆಗೆ ಹಣ ಪಡೆಯಬಹುದು..

- Advertisement -

Post office Scheme: ಇಂದಿನ ಕಾಲದಲ್ಲಿ ಉಳಿತಾಯ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಜವಾಬ್ದಾರಿ ಹೆಗಲೇರಿದ ಮೇಲೆ ಹೇಗೆ ಹಣದ ಬೆಲೆ ತಿಳಿಯುವುದೋ, ಜವಾಬ್ದಾರಿ ಎಲ್ಲ ಮುಗಿಸಿ, ರಿಟೈರ್‌ಮೆಂಟ್ ತೆಗೆದುಕೊಂಡಾಗಲೂ ಹಣ ಅಷ್ಟೆ ಮುಖ್ಯವಾಗಿರುತ್ತದೆ. ಹಾಗಾಗಿ ಜವಾಬ್ದಾರಿ ಅಂತಾ ಹಣವನ್ನೆಲ್ಲ ಖರ್ಚು ಮಾಡುವ ಮುನ್ನ, 60 ಕಳೆದ ಮೇಲೆ ಕೂತು ತಿನ್ನಲೊಂದು ದಾರಿ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.

ಹೀಗಾಗಿ ನೀವು ಬ್ಯಾಂಕ್, ಮ್ಯೂಚ್ವಲ್ ಫಂಡ್, ಪೋಸ್ಟ್ ಆಫೀಸ್ ಸ್ಕೀಮ್‌ನಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡು, ಹಣ ಕಟ್ಟಿ, ಮುಂದಿನ ಜೀವನಕ್ಕೆ ಕೂಡಿಡುವುದು ಉತ್ತಮ. ಅಂಥ ಪೋಸ್ಟ್ ಆಫೀಸ್‌ ಸ್ಕೀಮ್‌ಗಳಲ್ಲಿ ಒಂದು ಯೋಜನೆಯ ಬಗ್ಗೆ ನಾವಿವತ್ತು ನಿಮಗೆ ವಿವರಿಸಲಿದ್ದೇವೆ.

1ರಿಂದ 5 ವರ್ಷಗಳವರೆಗಿನ ಎಫ್‌ಡಿ ಸ್ಕೀಮ್‌ಗಳು ಪೋಸ್ಟ್ ಆಫೀಸಿನಲ್ಲಿ ಲಭ್ಯವಿದೆ. ಆದರೆ ನೀವು ಯಾವುದೇ ಸ್ಕೀಮ್ನಲ್ಲಿ ಹೂಡಿಕೆ ಮಾಡಿದರೂ, ಅದು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್ ಸ್ಕೀಮ್ ಆಗಿದ್ದಲ್ಲಿ, ನಿಮಗೆ ಲಾಭ ಹೆಚ್ಚು ಬರುತ್ತದೆ. ಏಕೆಂದರೆ, ನೀವು ಹಣವನ್ನು ಹೆಚ್ಚು ಕಾಲ ಪೋಸ್ಟ್ ಆಫೀಸಿನಲ್ಲಿ ಇಟ್ಟಷ್ಟು, ಬಡ್ಡಿ ಕೂಡ ಅಷ್ಟೇ ಹೆಚ್ಚಾಗಿ ನಿಮ್ಮ ಕೈ ಸೇರುತ್ತದೆ.

ಅಂಥ ಸ್ಕೀಮ್‌ಗಳಲ್ಲಿ ನೀವು ಹಣವನ್ನು 5 ವರ್ಷಗಳ ಕಾಲ ಪೋಸ್ಟ್ ಆಫೀಸಿನಲ್ಲಿರಿಸಿದರೆ, ನಿಮಗೆ ಮೂರು ಪಟ್ಟು ಬಡ್ಡಿ ಸಿಗುತ್ತದೆ. ಈ 5 ವರ್ಷದ ಎಫ್‌ಡಿ ಸ್ಕೀಮ್‌ನಲ್ಲಿ ಈಗ ನಿಮಗೆ 7.5 ಪರ್ಸೆಂಟ್ ಬಡ್ಡಿ ಸಿಗುತ್ತದೆ. ಉದಾಹರಣೆಗೆ ನೀವು 5 ಲಕ್ಷವನ್ನು 5 ವರ್ಷಗಳ ಕಾಲ ಇನ್ವೆಸ್ಟ್ ಮಾಡಿ, ಅದನ್ನು ವಿಸ್ತರಿಸಿ, ಇನ್ನೂ 10 ವರ್ಷಗಳ ಕಾಲ ಅಂದ್ರೆ ಒಟ್ಟು 15 ವರ್ಷಗಳ ಕಾಲ ಎಫ್‌ಡಿಯಲ್ಲಿ ಇನ್ವೆಸ್ಟ್ ಮಾಡಬೇಕು. ಆಗ ಬಡ್ಡಿಗೆ ಬಡ್ಡಿ ಸೇರಿ ನಿಮ್ಮ ಹಣದ ಮೊತ್ತ 15 ಲಕ್ಷಗಳವರೆಗೆ ಹೋಗುತ್ತದೆ.

ಆದರೆ ಪೋಸ್ಟ್ ಆಫೀಸ್ ನಿಯಮದಂತೆ ನೀವು ರಿ ಇನ್ವೆಸ್ಟ್ ಮಾಡುವುದನ್ನು ಮಾತ್ರ ಮರೆಯಬಾರದು. ಇನ್ನು ನೀವು ಇನ್ವೆಸ್ಟ್ ಮಾಡಿದ ಹಣ ಅರ್ಜೆಂಟ್ ಆಗಿ ನಿಮಗೆ ವಾಪಸ್ ಬೇಕೆಂದರೆ, ಅದನ್ನು ಪೋಸ್ಟ್ ಆಫೀಸಿನಲ್ಲಿ ವಾಪಸ್ ನೀಡುತ್ತಾರೆ. ಆದರೆ ಅದಕ್ಕಾಗಿ ಸಣ್ಣ ಅಮೌಂಟ್ ದಂಡ ಕಟ್ಟಬೇಕಾಗುತ್ತದೆ.

- Advertisement -

Latest Posts

Don't Miss