MadhyaPradesh : ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಆಫ್ರಿಕನ್ ಚಿರತೆ ಮೃತಪಟ್ಟಿವುದಾಗಿ ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ತೇಜಸ್ ಹೆಸರಿನ ಈ ಚಿರತೆ ಮಂಗಳವಾರ ಉದ್ಯಾನವನದಲ್ಲಿ ಮೃತಪಟ್ಟಿದೆ.
ತೇಜಸ್ ಚಿರತೆಯನ್ನು ಮಿಲನಕ್ಕಾಗಿ ನಮೀಬಿಯಾದ ಹೆಣ್ಣು ಚೀತಾದೊಂದಿಗೆ ಉದ್ಯಾನವನದ ಆವರಣದಲ್ಲಿ ಬಿಡಲಾಗಿತ್ತು. ಬೆಳಗ್ಗೆ ಹೊತ್ತು ಸಿಬ್ಬಂದಿಗಳು ನೋಡಿದಾಗ ತೇಜಸ್ ‘ಕುತ್ತಿಗೆಯಲ್ಲಿ ಗಾಯವಾಗಿರುವುದು ಕಂಡು ಬಂದಿತ್ತು. ವೈದ್ಯಕೀಯ ತಜ್ಞರು ಪರಿಶೀಲಿಸಿದಾಗ ಗಾಯವು ಗಂಭೀರ ಸ್ವರೂಪದ್ದಾಗಿದೆ ಎಂಬುವುದು ತಿಳಿದು ಬಂದಿದೆ. ತಕ್ಷಣ ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡಲು ವೈದ್ಯಕೀಯ ತಂಡವು ಸ್ಥಳಕ್ಕೆ ಆಗಮಿಸಿದಾಗ ಚಿರತೆ ಮೃತಪಟ್ಟಿದೆ ಎಂದು ಹಿರಿಯ ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಹೆಣ್ಣು ಚೀತಾದೊಂದಿಗೆ ದೈಹಿಕ ಘರ್ಷಣೆಯೇ ಸಾವಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಕಳೆದ ಮಾರ್ಚ್ ತಿಂಗಳಿಂದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆಗಳು ಸಾವನ್ನಪ್ಪಿದೆ. ಮಾರ್ಚಲ್ಲಿ ನಮೀಬಿಯಾದ ಹೆಣ್ಣು ಚೀತಾಕ್ಕೆ ಜನಿಸಿದ್ದ ನಾಲ್ಕು ಮರಿಗಳಲ್ಲಿ ಮೂರು ಸಾವನ್ನಪ್ಪಿವೆ ಎಂದು ತಿಳಿದು ಬಂದಿವೆ.
RahulGandhi : ‘ರಾಗಾ’ಗೆ ‘ರಾಖಿ’ ಟಿಪ್ಸ್…! ಪ್ರಧಾನಿಯಾಗಲು ಹೀಗೆ ಮಾಡಿ ಎಂದ ಬಾಲಿವುಡ್ ತಾರೆ…!




