Pickup : ಮನೆ ಮೇಲೆ ಪಿಕಪ್ ಬಿದ್ದು ಮಹಿಳೆ ಗಂಭೀರ..!

Manglore News: ಮಂಗಳೂರಿನ ಬಳಿ ಪಿಕಪ್ ಒಂದು ಮನೆ ಮೇಲೆ ಬಿದ್ದು ಮಹಿಳೆ  ಗಂಭೀರವಾಗಿರೋ ಘಟನೆ ನಡೆದಿದೆ.ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದು, ಗಂಭೀರ ಗಾಯಗೊಂಡ ಮಹಿಳೆ ಮನೆಯೊಳಗೆ ಸಿಲುಕಿ ಹಾಕಿಕೊಂಡ ಘಟನೆ ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ.

ಕೂರೇಲು ಮದ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿರುವ ಮನೆ ಸಂಪೂರ್ಣ ಹಾನಿಯಾಗಿದೆ. ಘಟನೆಯ ವೇಳೆ ಮನೆಯೊಳಗೆ ಮಹಿಳೆ ಮಲಗಿದ್ದರು ಎನ್ನಲಾಗಿದ್ದು, ಗಂಭೀರವಾಗಿದ್ದಾರೆ.

ವಾಹನವನ್ನು ತೆರವು ಮಾಡದೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

Bike weeling-ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ತಗಲಾಕ್ಕೊಂಡೆ..!

Chaddi gang-ಬೆಂಗಳೂರಿನಲ್ಲಿ ಶುರುವಾದ ಚಡ್ಡಿ ಹಾವಳಿ

Siddappa Veerappa yaligar :ಗೋವಾ ವಿಮೋಚನಾ ಚಳವಳಿ ಹೋರಾಟಗಾರ ಶ್ರೀ ಸಿದ್ದಪ್ಪ ವೀರಪ್ಪ ಯಲಿಗಾರ ವಿಧಿವಶ

About The Author