ತಂತ್ರಜ್ಞಾನ: ಇತ್ತಿಚಿನ ದಿನಗಳಲ್ಲಿ ತಂತ್ರಜ್ಞಾನದಿಂದ ಬಹಳಷ್ಟು ಉಪಯೋಗಗಳು ಆಗುತ್ತಿವೆ ತಂತ್ರಜ್ಞಾನದಿಂದ ಜನ ಸಮಯ ಯವನ್ನು ಉಳಿತಾಯ ಮಾಡುತ್ತಿದ್ದಾರೆ. ಹಾಗೆಯೆ ಕುಳಿತಲ್ಲಿಯೆ ಹಣವನ್ನು ಸಂಪಾದಿಸುತ್ತಿದ್ದಾರೆ.ಇದೆಲ್ಲ ನಿಮಗೆ ಗೊತ್ತಿರುವ ವಿಷಯವೇ ಆದರೆ ಐಪೋನ್ ನಲ್ಲಿರುವ ತಂತ್ರಜ್ಞಾನದಿಂದ ಒಬ್ಬ ವ್ಯಕ್ತಿಯ ಜೀವವನ್ನೇ ಉಳಿಸಿದೆ ಎಂದರೆ ನೀವು ನಂಬುತ್ತೀರಾ ?
ಐಫೋನ್ನ ವಿಶಿಷ್ಟತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 400 ಅಡಿಯಷ್ಟು ಕೆಳಗೆ ಕಾರು ಬಿದ್ದ ಸಂದರ್ಭದಲ್ಲಿ ಅಪಘಾತದಿಂದ ಒಬ್ಬ ವ್ಯಕ್ತಿಯು ಪಾರಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಆದರೆ ಇಂತಹ ಅವಘಡಕ್ಕೆ ಒಳಗಾದ ಐಫೋನ್ ಬಳಕೆದಾರರೊಬ್ಬರು ಐಫೋನ್ ಸಹಾಯದಿಂದ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಅಮೆರಿಕದ ಲಾಸ್ ಏಂಜಲೀಸ್ ನ ಮೌಂಟ್ ವಿಲ್ಸನ್ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಐಫೋನ್ ಬಳಕೆದಾರರ ಕಾರು 400 ಅಡಿ ಆಳದ ಕಣಿವೆಗೆ ಬಿದ್ದಿದೆ. ಆ ಸಮಯದಲ್ಲಿ ಅವರ ಬಳಿಯಿದ್ದ ಐಫೋನ್ 14 ಅವರ ಜೀವ ಉಳಿಸಿದೆ.ಅಪಘಾತದ ಸ್ಥಳದಲ್ಲಿ ವೈ-ಫೈ ಕವರೇಜ್ ಅಥವಾ ಸೆಲ್ಯುಲಾರ್ ನೆಟ್ವರ್ಕ್ ಇರಲಿಲ್ಲ. ಆದರೆ, ಐಫೋನ್ ಸಾಧನದಲ್ಲಿ ಕಾರು ಅಪಘಾತವಾಗಿದೆ ಎಂದು ದಾಖಲಿಸಲಾಗಿದೆ. ಸಾಧನವು ತಕ್ಷಣವೇ ತುರ್ತು ಕೇಂದ್ರಕ್ಕೆ ಮೆಸೇಜನ್ನು ಕಳುಹಿಸಿತು. ಈ ಮೆಸೇಜನ್ನು ಕಳುಹಿಸಲು ಐಫೋನ್ ಉಪಗ್ರಹ ಸಂಪರ್ಕವನ್ನು ಬಳಸುತ್ತದೆ.
ಇಷ್ಟೇ ಅಲ್ಲ, ಐಫೋನ್ನಿಂದಾಗಿ, ತುರ್ತು ತಂಡವು ವ್ಯಕ್ತಿಯ ನಿಖರವಾದ ಸ್ಥಳವನ್ನು ಸಹ ತಿಳಿದಿತ್ತು. ಹಾಗಾಗಿ ಸಂದೇಶ ಬಂದ ತಕ್ಷಣ ತುರ್ತು ಪಡೆ ಕೂಡ ಸಂಬಂಧಪಟ್ಟ ವ್ಯಕ್ತಿ ಎಲ್ಲಿದ್ದಾನೆ ಎಂದು ತಿಳಿದು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.ಈ ರೀತಿಯ ವೈಶಿಷ್ಟ್ಯಗಳು ಎಲ್ಲಾ ಕಂಪನಿಯ ಮೊಬೈಲ್ ಗಳಲ್ಲಿ ಬಂದರೆ ಎಷ್ಟು ಒಳ್ಳೆಯದು ಅಲ್ಲವೆ ಬಡ ಕುಟುಂಬದವರು ಸಹ ತಮ್ಮ ಅಪಾಯದಿಂದ ತಪ್ಪಿಸಿಕೊಳ್ಳಬಹುದು.
ಪತಿ ಮೋಸ ಮಾಡಿ ಸಿಕ್ಕಿಬಿದ್ದರೆ, ಪತ್ನಿ ಅವನನ್ನು ಕೊಲ್ಲಬಹುದಂತೆ..! Abroad Rules part 3