Business Tips: ವಿದೇಶದ ಹುಡುಗಿಯೊಬ್ಬಳು ತನ್ನ 29ನೇ ವಯಸ್ಸಿನಲ್ಲಿ 17 ಕೋಟಿ ರೂಪಾಯಿ ಗಳಿಸಿದ್ದಾಳೆ. ಅಲ್ಲದೇ ತನ್ನ 35ನೇ ವಯಸ್ಸಿಗೆ ರಿಟೈರ್‌ಮೆಂಟ್ ತೆಗೆದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆಕೆಯ ಹೆಸರು ಕೇಟಿ. ಹಾಗಾದರೆ ಕೇಟಿ ಹೀಗೆ ಹಣ ಉಳಿತಾಯ ಮಾಡಲು ಹೇಗೆ ಸಾಧ್ಯವಾಯಿತು..? ಇದನ್ನು ಕೂಡ ಆಕೆ ವಿವರಿಸಿದ್ದಾಳೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕೇಟಿ ಮೊದಲೆಲ್ಲ ತಿಂಗಳಿಗೆ 45ರಿಂದ 50 ಸಾವಿರ ರೂಪಾಯಿ ಬ್ಯೂಟಿಪಾರ್ಲರ್‌ಗಳಿಗೆ ವ್ಯಯಿಸುತ್ತಿದ್ದಳು. ಜಿಮ್‌ಗಾಗಿ 17ರಿಂದ 20 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದಳು. ಇದನ್ನು ಬಿಟ್ಟು ಸುತ್ತಾಟ, ಬಟ್ಟೆ, ಊಟ, ತಿಂಡಿ ಹೀಗೆ ಬಂದ ಸಂಬಳವೆಲ್ಲ ಇಂಥ ಖರ್ಚಿಗೆ ಹಾಕುತ್ತಿದ್ದಳು. ಆದರೆ ಆಕೆ ತಾನು ಕೂಡ ಸೇವಿಂಗ್ಸ್ ಮಾಡಬೇಕೆಂದು ಬಯಸಿ, ಇಂಥ ಖರ್ಚುಗಳನ್ನು ಕಡಿಮೆ ಮಾಡಿದಳು. ಕೆಲವು ಖರ್ಚುಗಳನ್ನು ಸಂಪೂರ್ಣ ನಿಲ್ಲಿಸಿಬಿಟ್ಟಿದ್ದಳು.
ಎರಡನೇಯದಾಗಿ ಕೇಟಿ ಹೆಚ್ಚು ಸಂಬಳ ಸಿಗುವ ಕೆಲಸಕ್ಕೆ ಸೇರಿದಳು. ನೀವು ಹಲವು ಕಡೆ ನೋಡಿರಬಹುದು. ಒಂದೇ ಕೆಲಸವಾಗಿದ್ದರೂ, ಬೇರೆ ಬೇರೆ ಕಡೆ ಬೇರೆ ಬೇರೆ ಸಂಬಳವಿರುತ್ತದೆ. ಮೊದಲು ಕೇಟಿ ಗ್ರಾಫಿಕ್ ಡಿಸೈನರ್ ಕೆಲಸವನ್ನು ಒಂದು ಚಿಕ್ಕ ಕಂಪನಿಯಲ್ಲಿ ಮಾಡುತ್ತಿದ್ದಳು. ಆಗ ಆಕೆಗೆ ಇದೇ ಕೆಲಸವನ್ನು ಐಟಿ ಕಂಪನಿಯಲ್ಲಿ ಮಾಡಿದರೆ, ಇದಕ್ಕಿಂತ 10 ಪಟ್ಟು ಹೆಚ್ಚು ಸಂಬಳ ಕೊಡುತ್ತಾರೆಂದು ಗೊತ್ತಾಯಿತು. ಆಗ ಆಕೆ ಐಟಿ ಕಂಪನಿಗೆ ಸೇರಿ, ಹೆಚ್ಚು ಸಂಬಳ ಪಡೆಯತೊಡಗಿದಳು.
ಮೂರನೇಯದಾಗಿ ಕೇಟಿ ತನಗೆ ಬಂದ ಸಂಬಳವನ್ನು ಹೆಚ್ಚು ಬಡ್ಡಿ ಸಿಗುವಲ್ಲಿ ಉಳಿತಾಯಕ್ಕೆ ಹಾಕಲು ಪ್ರಾರಂಭಿಸಿದಳು. 5ರಿಂದ 6 ವರ್ಷಗಳಲ್ಲಿ ಆಕೆಯ ಹಣಕ್ಕೆ ಬಡ್ಡಿ ಸಿಕ್ಕು, ಲಕ್ಷದಲ್ಲಿದ್ದ ಆ ಹಣ, ಕೋಟಿಗೆ ಹೆಚ್ಚಿತು.
ನಾಲ್ಕನೇಯದಾಗಿ ಕೊರೊನಾ ಸಮಯದಲ್‌ಲಿ ಕೇಟಿ ತನ್ನ ತಂದೆ ತಾಯಿ ಜೊತೆ ಇರಲು ತನ್ನ ಊರಿಗೆ ಬಂದಳು. ಮತ್ತು ಅವಳಿನ್ನು ತನ್ನ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾಳೆ. ಈ ಮೂಲಕ ಬಾಡಿಗೆ ಹಣ ಉಳಿಸಿದ್ದಾಳೆ. ಮತ್ತು ಆ ಹಣವನ್ನ ಕೂಡ ಕೆಲವು ಕಡೆ ಇನ್ವೆಸ್ಟ್ ಮಾಡಿದ್ದಾಳೆ.
ಹಾಗಾದರೆ ಕೇಟಿ ಅಷ್ಟೆಲ್ಲ ಹಣ ಗಳಿಸಿ, ಲೈಫ್ ಎಂಜಾಯ್ ಮಾಡಿಲ್ಲವಾ ಅಂತಾ ನೀವು ಕೇಳಬಹುದು. ಖಂಡಿತಾ ಕೇಟಿ ತನ್ನ ಲೈಫ್ ಎಂಜಾಯ್ ಮಾಡುತ್ತಿದ್ದಾಳೆ. ಆಗಾಗ ಟ್ರಿಪ್ ಹೋಗಿ ಬರುತ್ತಾಳೆ. ಅಗತ್ಯವಿದ್ದಷ್ಟು ಬಟ್ಟೆ, ಊಟ, ತಿಂಡಿ, ಖರೀದಿಸುತ್ತಾಳೆ. ತನ್ನ ಸ್ನೇಹಿತರೊಟ್ಟಿಗೆ ಮೋಸು ಮಸ್ತಿಯೂ ಮಾಡುತ್ತಾಳೆ. ಆದರೆ ಅದೆಲ್ಲ ಮಿತಿಯಲ್ಲಿದೆ. ಹಾಗಾಗಿ ಆಕೆಯ ಉಳಿತಾಯ 17 ಕೋಟಿ ಇದೆ.
Chawli Leaves : ಕೆಂಪು ದಂಡಿನ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ…?!