Business Tips: ಕೆಲವರು ಜನ ಸಂದಣಿ ಇದಲ್ಲದ ಪ್ರದೇಶದಲ್ಲಿ ಅಂಗಡಿ ಇಟ್ಟರೂ, ಅವರ ಅಂಗಡಿಗೆ ದೂರ ದೂರದಿಂದಲೂ ಗ್ರಾಹಕರು ಬರುತ್ತಾರೆ. ಆದ್ರೆ ಇನ್ನು ಕೆಲವರು ಒಳ್ಳೆಯ ಜಾಗದಲ್ಲಿ ಅಂಗಡಿ ಇಟ್ಟರೂ, ಅಂಥ ಲಾಭವೇನು ಆಗೋದಿಲ್ಲಾ. ಹಾಗಾಗಿ ನಾವಿಂದು ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಳವಾಗಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರನ್ನು ಅಂಗಡಿಗೆ ಸೆಳೆಯೋದು ಒಂದು ಕಲೆ. ಈ ಕಲೆ ಕರಗತವಾಗಬೇಕು ಅಂದ್ರೆ, ನೀವು ಗ್ರಾಹಕರನ್ನು ಗಮನಿಸಬೇಕು. ಅವರು ಯಾವ ಸಾಮಗ್ರಿಯನ್ನು ಹೆಚ್ಚು ಖರೀದಿಸುತ್ತಾರೆ ಅನ್ನುವ ಕಡೆ ನಿಮಗೆ ಗಮನವಿರಬೇಕು. ಅವರು ಪ್ರತೀ ಸಲ ಬಂದಾಗಲೂ ಒಂದೇ ರೀತಿಯ ಸಾಮಗ್ರಿ, ಒಂದೇ ಕ್ವಾಂಟಿಟಿಯಲ್ಲಿ ಖರೀದಿಸುತ್ತಿದ್ದಾರೆ ಅಂತಾದರೆ, ಅವರು ಬರುತ್ತಿರುವುದನ್ನು ಕಂಡು, ಅವರು ಕೇಳುವ ಮುಂಚೆಯೇ ಅದನ್ನು ಅವರೆದುರು ಇಡಬೇಕು. ಆಗ ಅವರ ಮುಖದಲ್ಲಿ ನಗುವಿನ ಜೊತೆಗೆ, ನಿಮ್ಮ ಮೇಲೆ ನಂಬಿಕೆ ಬರುತ್ತದೆ.
ಎರಡನೇಯದಾಗಿ ನಿಮ್ಮ ಮಾತು ಸೌಮ್ಯವಾಗಿರಬೇಕು. ನಿಮ್ಮ ಮಾತಿನಿಂದ ನೀವು ಗ್ರಾಹಕರನ್ನು ಸೆಳೆಯಬೇಕು. ಹಲವರು ತಮಗೆ ಬರುವ ಲಾಭವನ್ನು ತಾವೇ ಹಾಳು ಮಾಡಿಕೊಳ್ಳುವುದು ಹೀಗೆ. ಗ್ರಾಹಕರು ಯಾವಾಗಲೂ ಉಳಿತಾಯ ಮಾಡುವ ದೃಷ್ಟಿಯಿಂದಲೇ ಖರೀದಿಗೆ ಬರುತ್ತಾರೆಂಬುದನ್ನು ಅರಿತುಕೊಳ್ಳಿ. ಹಾಗಾಗಿ ಅವರು ಕಡಿಮೆ ಬೆಲೆಗೆ ಸಾಮಗ್ರಿಯನ್ನು ಕೇಳುತ್ತಾರೆ. ಆಗ ಅಚಾನಕ್ ಆಗಿ ನೀವು ರಫ್ ಆಗಿ ರಿಪ್ಲೈ ಕೊಟ್ಟರೆ, ಅವರಿನ್ನೆಂದೂ ನಿಮ್ಮ ಅಂಗಡಿಗೆ ಬರುವುದಿಲ್ಲ. ಮತ್ತು ಇತರರಿಗೂ ನಿಮ್ಮ ಅಂಗಡಿ ಬಗ್ಗೆ ಋಣಾತ್ಮಕವಾಗಿ ಹೇಳಿಬಿಡುತ್ತಾರೆ. ಆಗ ವ್ಯಾಪಾರದಲ್ಲಿ ನಷ್ಟವಾಗುತ್ತದೆ. ಹಾಗಾಗಿ ಮಾತು ಮಿತವಾಗಿ, ಹಿತವಾಗಿ ಇರಲಿ. ನಿಮ್ಮ ಜೊತೆ, ನಿಮ್ಮ ಬಳಿ ಕೆಲಸ ಮಾಡುವವರ ಮಾತು ಕೂಡ ಉತ್ತಮವಾಗಿರಲಿ.
ಮೂರನೇಯದಾಗಿ, ನೀವು ಯಾವ ಸಾಮಗ್ರಿಯನ್ನು ಮಾರುತ್ತಿದ್ದೀರೋ, ಅದರ ಕ್ವಾಲಿಟಿ ಉತ್ತಮವಾಗಿರಲಿ. ಉದಾಹರಣೆಗೆ ಇತ್ತೀಚೆಗೆ ದೊಡ್ಡ ದೊಡ್ಡ ಸಿಟಿಗಳಲ್ಲಿ ಜನ, ಹೊಟೇಲ್‌ಗಳಿಗೆ ಹೋಗಿ, ಮೆನು ನೋಡುತ್ತಾರೆ ಹೊರತು, ಆಹಾರಕ್ಕಿರುವ ರೇಟ್ ನೋಡುವುದಿಲ್ಲ. ಅಲ್ಲಿನವರು ಉತ್ತಮ ಕ್ವಾಲಿಟಿಯ, ರುಚಿಯಾದ ಊಟ ಕೊಟ್ಟರೆ ಸಾಕು, ಜನ ಪದೇ ಪದೇ ಅದೇ ಹೊಟೇಲ್‌ಗೆ ಹೋಗುತ್ತಾರೆ. ಹಾಗಾಗಿ ನೀವು ಯಾವ ಸಾಮಗ್ರಿಯನ್ನು ಮಾರುತ್ತಿರೋ, ಆ ಸಾಮಗ್ರಿ ಉತ್ತಮ ಕ್ವಾಲಿಟಿಯದ್ದಾಗಿರಲಿ.
Chawli Leaves : ಕೆಂಪು ದಂಡಿನ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ…?!