Friday, November 22, 2024

Latest Posts

Canada:ಬಹುಕಾಲದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿರುವ ಕೆನಡಾ ಪ್ರಧಾನಿ

- Advertisement -

ಅಂತರಾಷ್ಟ್ರೀಯ ಸುದ್ದಿ: ಹೌದು ಸ್ನೇಹಿತರೆ ಕೆನಾಡಾದ ಪ್ರಧಾನಿಯಾಗಿರುವ ಜಸ್ಟಿನ್ ಟ್ರುಡೋ ಅವರು ಮತ್ತು ತಮ್ಮ ಪತ್ನಿ ಸೋಫಿ ಗ್ರಗೋರಿಯಾ ಇಬ್ಬರ ನಡುವೆ ಬಿರುಕು ಉಂಟಾಗಿದ್ದು ತಮ್ಮ  ಹದಿನೆಂಟು ವರ್ಷದ ದಾಂಪತ್ಯ ಜೀವನವನ್ನು ವಿಚ್ಚೇದನದೊಂದಿಗೆ ಅಂತ್ಯ ಹಾಡಲಿದ್ದಾರೆ.

2005 ರಲ್ಲಿ ದಾಂಪತ್ಯ  ಜಿವನಕ್ಕೆ ಕಾಲಿಟ್ಟಿರುವ ದಂಪತಿಗಳಿಗೆ 15, 14,  ಮತ್ತು9 ವರ್ಷ ವಯಸ್ಸಿನ ಮೂವರು ಮಕ್ಕಳಿದ್ದಾರೆ.ಇಬ್ಬರ ಮದ್ಯೆ ಬಿರುಕು  ಬಂದಾಗಿನಿಂದ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ

2015 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಬೆಳವಣಿಗೆಯು ಜಸ್ಟಿನ್‌ ಟ್ರುಡೊಗೆ ಇದು ದೊಡ್ಡ ವೈಯಕ್ತಿಕ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಅವರು ಚುನಾವಣೆಯಲ್ಲಿ ತಮ್ಮ ಲಿಬರಲ್ ಪಕ್ಷದ ಸ್ಥಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದುವ ಯೋಚನೆಯಲ್ಲಿರುವಾಗಲೇ ಇದು ಸಂಭವಿಸಿದೆ.ವಿಪರ್ಯಾಸ ಅಂದ್ರೆ ಜಸ್ಟಿನ್ ಟ್ರುಡೊ ಅವರ ತಂದೆ, ಮಾಜಿ ಪ್ರಧಾನಿ ಪಿಯರೆ ಟ್ರುಡೊ ಅವರು ಕೂಡ ಅಧಿಕಾರದಲ್ಲಿದ್ದಾಗ 1977 ರಲ್ಲಿ ಅವರ ಪತ್ನಿ ಮಾರ್ಗರೆಟ್‌ರಿಂದ ವಿಚ್ಚೇದನ ಪಡೆದಿದ್ದರು.

ಮುಂದಿನ ವಾರ ಜಸ್ಟಿನ್ ಟ್ರುಡೋ ಅವರು ತಮ್ಮ ವಿಚ್ಛೇದನದ ಕುರಿತು ಮಾತನಾಡುವ ಸಾಧ್ಯತೆ ಇದೆ. ಇದೇ ವೇಳೆ ಈ ದಂಪತಿ ತಮ್ಮ ಮಕ್ಕಳನ್ನು ಬೆಳೆಸುವ ಬಗ್ಗೆಯೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

HD KumaraSwami : ಯೂರೋಪ್ ನಲ್ಲಿ ಹೆಚ್. ಡಿ.ಕೆ ಕುಟುಂಬ…!

Rajni Kanth: ರಜನಿಕಾಂತ ಅವರನ್ನೇ ಹೋಲುವ ಪಾಕಿಸ್ಥಾನದ ವ್ಯಕ್ತಿ

Amazon: ಹೇಳದೆ ಕೇಳದೆ ಅಮೇಜಾನ್ ನಿಂದ ಮನೆ ಬಾಗಿಲಿಗೆ ವಸ್ತುಗಳು.

- Advertisement -

Latest Posts

Don't Miss