HD KumaraSwami : ಯೂರೋಪ್ ನಲ್ಲಿ ಹೆಚ್. ಡಿ.ಕೆ ಕುಟುಂಬ…!

International News : ಯೂರೋಪ್ ನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕುಟುಂಬ ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ಸದ್ಯ ಅನೇಕ ರಾಜಕೀಯ ವಿಚಾರವಾಗಿ ಜಂಜಾಟಬಗಳು ಚರ್ಚೆಗಳು ನಡೆಯುತ್ತಿದ್ದ ವೇಳೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಸ್ವಲ್ಪ ನಿರಾಳತೆ ಭಾವದಿಂದ ಯೂರೋಪ್ ಗೆ ಹಾರಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಕುರಿತಾಗಿಯೂ ಅನೇಕ ಚರ್ಚೆಗಳು ನಡೆದಿದ್ದವು. ಅದಷ್ಟೇ ಅಲ್ಲದೆ  ಈ ವಿಚಾರವಾಗಿ ಮೈತ್ರಿ ಸಲ್ಲದು ಎಂಬುವುದಾಗಿಯೂ ಅನೇಕ ಬಿಜೆಪಿ  ನಾಯಕರು ಟ್ವೀಟ್ ಕೂಡಾ ಮಾಡಿ ಅಭಿಪ್ರಾಯ ಮಂಡಿಸಿದ್ದರು.

ಇನ್ನು ಕಾಂಗ್ರೆಸ್  ಮಹಾ ಸಭೆ ಬಗ್ಗೆಯೂ ಪ್ರತಿಭಟನೆಯಲ್ಲೂ ಭಾಗ ವಹಿಸಿದ್ದ ಕುಮಾರಸ್ವಾಮಿ ಸಧ್ಯ ಇವೆಲ್ಲಾ ಜಂಜಾಟಗಳನ್ನು ಬಿಟ್ಟು ತನ್ನ ಕುಟುಂಬದ ಜೊತೆ ಯುರೋಪ್ ನಲ್ಲಿ ನಿರಾಳತೆ ಪಡೆಯುತ್ತಿದ್ದಾರೆ. ತನ್ನ ಮಗ ನಿಖಿಲ್ ಕುಮಾರ ಸ್ವಾಮಿ ಮಡದಿ ಅನಿತಾ ಕುಮಾರ ಸ್ವಾಮಿ ಹಾಗು ಸೊಸೆ ರೇವತಿ ಹಾಗು ಮೊಮ್ಮಗನ ಜೊತೆ ನಿಶ್ಚಿಂತೆಯಿಂದ ಯೂರೋಪ್ ನಲ್ಲಿ ಸಮಯ ಕಳೆಯುತ್ತಿದ್ದಾರೆ.

ಇದೀಗ ಯೂರೋಪ್ ಪ್ರವಾಸದಲ್ಲಿ ಇರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Rajni Kanth: ರಜನಿಕಾಂತ ಅವರನ್ನೇ ಹೋಲುವ ಪಾಕಿಸ್ಥಾನದ ವ್ಯಕ್ತಿ

Greenland villas: ವಿಲ್ಲಾಗಳ ಮುಂದೆ ವ್ಯವಸಾಯ ಮಾಡುತ್ತಿರುವ ರೈತರು..!

Japan: ಜಾದು ಎಂಬಂತೆ ನಾಯಿಯಂತಾದ ಮನುಷ್ಯ

 

About The Author