Rayareddy Angry: ನಾನು ಸಿಟ್ಟಾಗಿದ್ದಕ್ಕೆ ಸಮಸ್ಯೆಗೆ ಪರಿಹಾರ’ : ರಾಯರೆಡ್ಡಿ

ಧಾರವಾಡ: ಶಾಸಕ ಬಸವರಾಜ್ ರಾಯರೆಡ್ಡಿ ಸಿಡಿದೆದ್ದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ನಮ್ಮ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎಂದು ದೂರಿದ್ದರು. ಆದರೆ, ಇದೀಗ ಬಸವರಾಜ್ ರಾಯರೆಡ್ಡಿ ನಿವಾಸಕ್ಕೆ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಎಂ.ಸಿ ಸುಧಾಕರ್ ಭೇಟಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ಟಿವಿ ಜೊತೆ ಮಾತಾಡಿದ ಬಸವರಾಜ್ ರಾಯರೆಡ್ಡಿ, ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಈ ಸಮಯದಲ್ಲಿ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಟ್ರಾನ್ಸಫಾರ್ಮರ್​ಗಳು ಬರ್ನ್ ಆಗುತ್ತಿವೆ. ಆದರೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಕಲಬುರಗಿಯ ಜೆಸ್ಕಾಂ ವ್ಯಾಪ್ತಿಗೆ ನಮ್ಮ ಜಿಲ್ಲೆ ಬರುತ್ತದೆ. ಆದರೆ ಯಾವ ಅಧಿಕಾರಿಗಳು ಜಿಲ್ಲೆಗೆ ಬರುತ್ತಿಲ್ಲ. ಹೀಗಾಗಿ ಸಿಎಂಗೆ ಸಭೆ ಮಾಡಿ ಅಂತಾ ಪತ್ರ ಬರೆದಿದ್ದೇನೆ.

ಜನರಿಗೆ ಗೊತ್ತಾಗಲಿ ಅಂತಾ ಆ ಪತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೇನೆ. ಸೆಪ್ಟೆಂಬರ್ 5ರಂದು ಇಂಧನ ಸಚಿವರು ಸಭೆ ಕರೆದಿದ್ದಾರೆ. ನನ್ನ ಪತ್ರದಿಂದ ಇಡೀ ಜೆಸ್ಕಾಂ ಸಮಸ್ಯೆ ಪರಿಹಾರ ಆಗುತ್ತದೆ ಎಂದು ರಾಯರೆಡ್ಡಿ ಹೇಳಿದ್ದಾರೆ.

Empty Lake: ಖಾಲಿಯಿರುವ ಕೆರೆ ತುಂಬಿಸಲು ಗ್ರಾಮಸ್ಥರು ಆಗ್ರಹ..!

Police: ದಲಿತರ ಭೂಮಿಯ ಮೇಲೆ ಸವರ್ಣಿಯರಿಗೆ ಯಾಕಿಷ್ಟು ಕಣ್ಣು..!

Tractor Driver: ಟ್ರ್ಯಾಕ್ಟರ್ ರಿವರ್ಸ್ ಚಲಾಯಿಸಿ ಯಲ್ಲಮ್ಮನ ಗುಡ್ಡಕ್ಕೆ ಹೋದ ಯುವಕ..!

About The Author