Kaveri water: ಘಟಬಂಧನ ಉಳಿಸಲು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ..!ಪ್ರಹ್ಲಾದ್ ಜೋಶಿ

ರಾಷ್ಟ್ರೀಯ ಸುದ್ದಿ:  ಸಂಸತ್ ಅಧಿವೇಶನದ ಬಗ್ಗೆ ಅನಗತ್ಯ ಪುಕಾರು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅಧಿವೇಶನ ಕರೆಯುವ ಸ್ವತಂತ್ರವಿದೆ. ಸಂವಿಧಾನದ 85ನೆ ವಿಧಿ ಪ್ರಕಾರ ರಾಷ್ಟ್ರಪತಿಗಳಿಗೆ ಮನವಿ ಮಾಡಿ ಅಧಿವೇಶನ ಕರೆದಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

92 ಬಾರಿ ದೇಶದ ಚುನಾಯಿತ ಪಕ್ಷಗಳನ್ನು ಕಾಂಗ್ರೆಸ್ ಕಿತ್ತೊಗೆದಿದೆ. ಈಗ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದೆ. ಅಧಿವೇಶನ ಕರೆಯುವ ಮೊದಲು ವಿಪಕ್ಷಗಳನ್ನು ಕೇಳುವ ಪದ್ಧತಿ ಇಲ್ಲ. ಸೂಕ್ತವಾದ ಸಮಯದಲ್ಲಿ ಅಧಿವೇಶನದ ಅಜೆಂಡಾ ತಿಳಿಯಲಿದೆ. ಸಂಸತ್ ಅಧಿವೇಶನ ಲೈವ್ ಆಗಿ ತೋರಿಸಲು ಶುರು ಮಾಡಿದ್ದು ನಾವೇ  ಎಂದು ಹೇಳಿದರು.

ಇನ್ನು ತಮಿಳುನಾಡಿಗೆ ನೀರು ಬಿಟ್ಟಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಜೋಶಿಯವರು ಘಮಂಡಿ ಘಟಬಂಧನ ಉಳಿಸಲು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ರಾಜ್ಯದ ಹಿತಾಸಕ್ತಿ ಬಲಿಕೊಟ್ಟು ಈಗ ಕೋರ್ಟ್‌ಗೆ ಹೋಗಿದ್ದಾರೆ. ಮೋದಿಯವರನ್ನು ಸೋಲಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನರು ಮೋದಿಯವರನ್ನು ಬೆಂಬಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.

ಭಾರತ ದೇಶದ ಹೆಸರಿನ ಬಗ್ಗೆ ಚರ್ಚೆ ನಡೆಸಿರುವ ಬೆನ್ನಲ್ಲೆ ಈ ಕುರಿತು ಸ್ಟಷ್ಟನೆ ನೀಡಿರುವ ಜೋಶಿಯವರು  ಭಾರತ್ ಹೆಸರಿನ ಕುರಿತು ಕೇಂದ್ರ ಸರ್ಕಾರದ ವಕ್ತಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಭಾರತ ಎನ್ನುವವರು ಭಾರತ ಅನ್ನಲಿ, ಇಂಡಿಯಾ ಅನ್ನೋರು ಇಂಡಿಯಾ ಅನ್ನಲಿ. ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Builders: ಪ್ಲಾಟ್ ಮಾರಾಟ ಮಾಡಿದ್ದರೂ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್..!

Auto: ಒಂದೇ ದಿನದಲ್ಲಿ ಆಟೋ ರಿಕ್ಷಾ ಕಳ್ಳರನ್ನು ಬಂಧಿಸಿದ ಪೊಲೀಸರು..!

Praladh Joshi: ಮುಸ್ಲಿಂ ಲೀಗ್ ದೇಶವನ್ನೇ ವಿಭಜನೆ ಮಾಡಿದೆ, ನರಮೇಧವಾಗಿದೆ..!

About The Author