political News: ನವದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಜೊತೆ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದು, ಮಾತುಕತೆ ಸಫಲವಾಗಿದೆ. ಜೊತೆಗೆ ಕ್ಷೇತ್ರ ಹಂಚಿಕೆಯ ಒಪ್ಪಂದ ಕೂಡ ಮಾಡಲಾಗಿದೆ.
ದೆಹಲಿಯಲ್ಲಿ ಅಮಿತ್ ಷಾ ಜೊತೆ ಮಾತುಕತೆ ನಡೆಸಿದ ದೇವೇಗೌಡರು. ಲೋಕಸಭೆ ಚುನಾವಣೆಯೂ ಮುನ್ನ, ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ. ಇವರೊಂದಿಗೆ ಜೆ.ಪಿ. ನಡ್ಡಾ ಕೂಡ ಹಾಜರಿದ್ದು, ಕರೆ ಮಾಡುವ ಮೂಲಕ ಪ್ರಧಾನಿಯೊಂದಿಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನಡೆಸಿದ್ದು, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಕೊಡಬೇಕು. ಉಳಿದ ಕ್ಷೇತ್ರ ಬಿಜೆಪಿಯವರಿಗೆ ಎಂದು ಹೇಳಿದ್ದಾರೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು, ಉಳಿದ ಕ್ಷೇತ್ರಗಳು ಜೆಡಿಎಸ್‌ಗೆ ಬಿಟ್ಟುಕೊಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಿದೆ.
Kaveri water: ಘಟಬಂಧನ ಉಳಿಸಲು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ..!ಪ್ರಹ್ಲಾದ್ ಜೋಶಿ
Narendra Modi: ನರೇಂದ್ರ ಮೋದಿಯವರು ಚಹಾ ಮಾರಿ ಪ್ರಧಾನಿಯಾದವರು: ಪ್ರಹ್ಲಾದ್ ಜೋಶಿ