ಕರ್ನಾಟಕ ಟಿವಿ : ರಾಜ್ಯಲ್ಲಿ ಇಂದು 22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.. ದಾವಣಗೆರೆ ಜಿಲ್ಲೆಯೊಂದರಲ್ಲೇ 12 ಪಕಕರಣ ಪತ್ತೆಯಾಗಿದೆ.. ಬೆಂಗಳೂರು ನಗರದಲ್ಲಿ 3, ಬಾಗಲಕೋಟೆಯಲ್ಲಿ 2, ಬಳ್ಳಾರಿ, ದ ಕನ್ನಡ, ಉ ಕನ್ನಡ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆ ಯಾಗಿದ್ದು 29 ಮಂದಿ ಸಾವನ್ನಪ್ಪಿದ್ದಾರೆ.. ಇನ್ನು 331 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಬೆಂಗಳೂರಿನಲ್ಲಿ ಪೇದೆ ಸೋಂಕು ತಗುಲಿರೋದು ದೃಢಪಟ್ಟಿದೆ.. ಇಂದು ವರಿದಿ ಮುನ್ನ ಪೇದೆ ಚಾಮರಾಜನಗರದ ತನ್ನ ಮಾವನ ಊರಿ ಗೆ ಭೇಟಿ ನೀಡಿದ್ರು.. ಈ ಹಿನ್ನೆಲೆ ಸಂಬಂಧಟ್ಟವರನ್ನ ಕ್ವಾರಂಟೈನ್ ಮಾಡಲಾಗಿದೆ.. ಇತ್ತ ಶಿವಾಜಿನಗರದಲ್ಲಿ ಕ್ವಾರಂಟೈನ್ ಮಾಡಿದ್ದ ಹೋಟೆಲ್ ನ ಹೌಸ್ ಕೀಪಿಂಗ್ ವ್ಯಕ್ತಿಗೆ ಸೋಂಕು.. ಈ ಹಿನ್ನೆಲೆ ಹೋಟೆಲ್ ಸೀಲ್ ಡೌನ್ ಮಾಡಲಾಗಿದೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು