Udupi News : ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಪದೇ ಪದೇ ಗೋಚರವಾಗುತ್ತಲಿವೆಯಾದರೂ ಅಧಿಕಾರಿಗಳು ಇನ್ನೂ ಮೌನವಾಗಿದ್ದಾರೆ. ಉಡುಪಿಯ ಅಜ್ಜರಕಾಡು ಎಂಬಲ್ಲಿರುವ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ. ಹತ್ತು ಡಯಾಲಿಸಿಸ್ ಯಂತ್ರಗಳ ಪೈಕಿ ಆರೇಳು ಯಂತ್ರಗಳು ಕೆಟ್ಟು ನಿಂತಿವೆ.
ಹೀಗಾಗಿ ಡಯಾಲಿಸಿಸ್ ಗಾಗಿ ಬರುವ ರೋಗಿಗಳ ಕೂಗು ಅರಣ್ಯರೋದನವಾಗುತ್ತಿದೆ. ಮೂರು ತಿಂಗಳ ಹಿಂದೆ ಈ ಕೇಂದ್ರದ ಅವ್ಯವಸ್ಥೆ ವಿರುದ್ಧ ರೋಗಿಗಳು ಮತ್ತವರ ಸಂಬಂಧಿಕರು ಪ್ರತಿಭಟಿಸಿದ್ದರು ಎಂದು ಹೇಳಲಾಗುತ್ತಿದೆ.
ಆದರೆ ಮೂರು ತಿಂಗಳ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲ. ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳು ಡಯಾಲಿಸಿಸ್ ಗಾಗಿ ಸರದಿಯಲ್ಲಿ ಕಾಯುತ್ತಿರುವ ದೃಶ್ಯ ಯಾವತ್ತೂ ಕಂಡು ಬರುತ್ತಿದೆ.ಎಲ್ಲಾ ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸದೆ ಇರುವುದು ಇದಕ್ಕೆ ಕಾರಣ.
ಯಂತ್ರಗಳು ಕೆಟ್ಟು ತಿಂಗಳುಗಳೇ ಕಳೆದರೂ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಅದನ್ನು ದುರಸ್ತಿ ಮಾಡಿಲ್ಲ. ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಈ ಅವ್ಯವಸ್ಥೆ ಬಗ್ಗೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ.
ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಡಜನರ ಜೀವಗಳ ಜತೆ ಚೆಲ್ಲಾಟ ಆಡುವ ಈ ಪ್ರವೃತ್ತಿ ಕೊನೆಗೊಳ್ಳಬೇಕಿದೆ. ಸರಕಾರ ಮತ್ತು ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
KhoKho Game : ಹಾಸನ: ಖೋಖೋ ಪಂದ್ಯಾವಳಿ ವೇಳೆ ಪುಂಡಾಟಿಕೆ ಮೆರೆದ ಪುಂಡರು , ಫೈನಲ್ ಪಂದ್ಯಾವಳಿ ರದ್ದು
Ganesh festival: ಹುಬ್ಬಳ್ಳಿಯ ಬೃಹತ್ ಗಣೇಶ ವಿಗ್ರಹಗಳಿಗಿದೆ ಪಶ್ಚಿಮ ಬಂಗಾಳ ಕಲಾವಿದರ ಸ್ಪರ್ಶ
Post Office: ವಿಮಾ ಅರ್ಜಿ ತಿರಸ್ಕರಿಸಿದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗ ದಂಡ..!

