Saturday, June 21, 2025

Latest Posts

ಚೀನಾ ಭಾರೀ ಹೊಡೆತ ನೀಡಲು ಅಮೆರಿಕ ಸಿದ್ಧತೆ

- Advertisement -

ಕರ್ನಾಟಕ ಟಿವಿ : ಚೀನಾ ವಿರುದ್ಧಅಮೆರಿಕ ಯುದ್ಧ ಶುರುಮಾಡಿದೆ. ಅದು ಯಾವ ಮಟ್ಟಿಗೆ ಅಂದ್ರೆ ಚೀನಾ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಮಹಾ ಸಮರ.. ಈ ಮಹಾಸಮರದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕೂಡ ಭಾಗಿಯಾಗಿಲಿವೆ. ಆದ್ರೆ ಅದು ಬಾಂಬ್ ಹಾಕುವ ಮೂಲಕ ಅಲ್ಲ.. ಚೀನಾ ನಿಂತಲ್ಲಿಯೇ ಕುಸಿದು ಬೀಳುವ ಹಾಗೆ ಅಮೆರಿಕ ತಂತ್ರ ಮಾಡಿದೆ.. ಇಡೀ ವಿಶ್ವದಲ್ಲಿ ಅರ್ಧಕ್ಕಿಂತ ಹೆಚ್ಚು ದೇಶಗಳಿಗೆ ಚೀನಾ ತನ್ನ ವಸ್ತುಗಳನ್ನ ರಫ್ತು ಮಾಡ್ತಿದೆ..  ಕೆಂಪು ರಾಷ್ಟ್ರದ ಆರ್ಥಿಕತೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣ ವ್ಯಾಪಾರ ವ್ಯವಹಾರ.. ಹೀಗಾಗಿ ಚೀನಾ ರಫ್ತು ಮಾಡುವ ವಸ್ತುಗಳನ್ನ ಭಾರತ ಸೇರಿದಂತೆ ಇತರ  ರಾಷ್ಟ್ರಗಳಲ್ಲಿ ಉತ್ವಾದನೆ ಮಾಡಿಸಿ ಜಗತ್ತಿಗೆ ಪೂರೈಸುವ ಕೆಲಸಕ್ಕೆ ಅಮೆರಿಕಾ ಕೈ ಹಾಕಿದೆ. ಅಮೆರಿಕಾ  ಸರ್ಕಾರ ಈ ದಿಸೆಯಲ್ಲಿ ಕೆಲಸ ಮಾಡ್ತಿದೆ. ಚೀನಾ ರಫ್ತು ಮಾಡುವ ವಸ್ತುಗಳ ಲಿಸ್ಟ್ ರೆಡಿ ಮಾಡಿಕೊಂಡಿದ್ದು ಅದನ್ನ ಯಾವ್ಯಾವ ದೇಶಗಳಲ್ಲಿ ಉತ್ಪಾದನೆ ಮಾಡಿಸ ಬಹುದು.. ಅನ್ನುವ ಕಡೆ ಸಹ ಗಮನ ಹರಿಸಿದೆ.. ಇನ್ನು  ಆಸ್ಟ್ರೇಲಿಯಾ ಅಂತ ರಾಷ್ಟ್ರಗಳು ಚೀನಾಗೆ ಮಾಂಸ ಸೇರಿದಂತೆ ಹಲವು ವಸ್ತುಗಳನ್ನ ರಫ್ತು ಮಾಡ್ತಿದೆ. ಈಗಾಗಿ ಆಸ್ಟ್ರೇಲಿಯಾ ಉತ್ಪಾದಿಸುವ ವಸ್ತುಗಳನ್ನ ಬೇರೆಡೆ ಎಲ್ಲಿ ರಫ್ತು ಮಾಡಬಹುದು ಅನ್ನುವ ಕಡೆ ಅಮೆರಿಕಾ ಕಾರ್ಯತಂತ್ರ ರೂಪಿಸುತ್ತಿದೆ.. ಚೀನಾದ ರಫ್ತು ಹಾಗೂ ಆಮದ್ದಿನ ಮೇಲೆ ದೊಡ್ಡ ಹೊಡೆತ ನೀಡುವ ಮೂಲಕ ಬಾಂಬಿ ಆರ್ಭಟವಿಲ್ಲದೆ ಚೀನಾವನ್ನ ಚಿತ್ ಮಾಡುವ ಕೆಲಸ ಸದ್ದಿಲ್ಲದೇ ಸಾಗಿದೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss