Political News: ಹುಬ್ಬಳ್ಳಿ: ಮಾಜಿ ಸಿಎಂ, ಎಂಎಲ್ಸಿ ಜಗದೀಶ್ ಶೆಟ್ಟರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಅಖಿಲ ಭಾರತ ವೀರಶೈವ ತಾಲೂಕಾ ಅಧ್ಯಕ್ಷ ಮಂಜುನಾಥ್ ಯಂಟ್ರಾವಿ ಎಂಬವರು ಪತ್ರ ಬರೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಲು ವೀರಶೈವ ಸಮಾಜದ ಜಗದೀಶ್ ಶೆಟ್ಟರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಬಿಜೆಪಿಯಲ್ಲಿ ವೀರಶೈವ ಸಮಾಜ ಕಡೆಗಣನೆ ಮಾಡಲಾಗ್ತಿದೆ. ಹೀಗಾಗಿ ವೀರಶೈವ ಸಮಾಜಕ್ಕೆ ತಾವು ಉನ್ನತ ಸ್ಥಾನ ನೀಡಬೇಕೆಂದು ಆಗ್ರಹಿಸಲಾಗಿದೆ.
ಈ ಹಿಂದೆ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆಲ್ಲಲಿದೆ ಎಂದು ರಕ್ತದಲ್ಲಿ ಮಂಜುನಾಥ್ ಪತ್ರ ಬರೆದಿದ್ದರು. ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಕಾಂಗ್ರೆಸ್ನಲ್ಲಿ ಲಿಂಗಾಯತರ ಕಡೆಗಣನೆ ಆಗಿದೆಯಾ?
ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಳ ಇಲ್ಲ ಅನ್ನುವ ವಿಚಾರವನ್ನು ನಾವು ಚರ್ಚೆ ಆಗಲಿ ಅಂತ ಹೇಳಿಲ್ಲ. ನಮ್ಮ ಅಧಿಕಾರಿಗಳಿಗೆ ಸೂಕ್ತ ಜಾಗ ಕೊಡಲಿ ಅಂತ ಹೇಳಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಅಲ್ಲದೇ, ನಮ್ಮ ಬಳಿ ಅಂಕಿ ಸಂಖ್ಯೆ ಇದೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಶಾಮನೂರು, ನಮ್ಮ ಬಳಿಯೂ ಅಂಕಿ ಸಂಖ್ಯೆ ಇದೆ. ನಾವು ಅದನ್ನು ಸಮಯ ಬಂದಾಗ ಪ್ರೂವ್ ಮಾಡ್ತೀವಿ. ನಮ್ಮ ಹತ್ತಿರನೂ ಪೆನ್ ಇದೆ. ಅನ್ಯಾಯ ಮಾಡಿರುವವರು ಅನ್ಯಾಯ ಮಾಡಿದ್ದೇವೆ ಅಂತ ಹೇಳುತ್ತಾರಾ? ನಮ್ಮ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯ ಆಗಿರೋ ವಿಚಾರ ಸಿಎಂ ಬಳಿ ಮಾತನಾಡುವೆ, ನಮ್ಮ ಸಮುದಾಯದಲ್ಲಿ ಒಗ್ಗಟ್ಟಿಲ್ಲ ಒಗ್ಗಟ್ಟು ಇದ್ದರೆ ಶಕ್ತಿ ಇರುತ್ತದೆ ಎಂದು ಹೇಳಿದರು.
ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..
12 ಗಂಟೆಯಲ್ಲಿ 120 ಕಿಮೀ ನಡೆದು ಎಲ್ಲಮ್ಮನ ಗುಡ್ಡಕ್ಕೆ ಬಂದು ಹರಕೆ ತೀರಿಸಿದವರಿಗೆ ಸನ್ಮಾನ..
7 ಮಂತ್ರಿ ಕೊಟ್ಟಿದ್ದೇವೆ, ಇನ್ನೆಷ್ಟು ಬೇಕು? ಸಿಎಂ ಸ್ಥಾನ ಬೇಕಾ? ಶಾಮನೂರು ವಿರುದ್ಧ ಹಳ್ಳಿಹಕ್ಕಿ ಗುಟುರು!




