Friday, November 14, 2025

Latest Posts

‘ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ’

- Advertisement -

Bengaluru: ಬೆಂಗಳೂರು: ಕರ್ನಾಟಕದ ಪರಿಸರ ರಾಯಭಾರಿ, ವೃಕ್ಷ ಮಾತೆ, ಸಾಲು ಮರದ ತಿಮ್ಮಕ್ಕ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ತಿಮ್ಮಕ್ಕ ಸಾವನ್ನಪ್ಪಿದ್ದಾರೆಂದು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಸಾಲು ಮರದ ತಿಮ್ಮಕ್ಕನ ದತ್ತು ಪುತ್ರ ಉಮೇಶ್, ಒಂದು ವೀಡಿಯೇ ಹಂಚಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಿಮ್ಮಕ್ಕನಿಗೆ, ತಿಂಡಿ ತಿನ್ನಿಸುವ ದೃಶ್ಯ ಇದಾಗಿದೆ. ಈ ವೀಡಿಯೋ ಶೇರ್ ಮಾಡುವ ಮೂಲಕ, ಉಮೇಶ್ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸೆಪ್ಟೆಂಬರ್ 26ರಂದು ತಿಮ್ಮಕ್ಕನಿಗೆ ಉಸಿರಾಟದ ತೊಂದರೆಯಾಗಿದ್ದು, ಹಾಗಾಗಿ ಬೇಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ಆರೋಗ್ಯ ಇನ್ನಷ್ಟು ಹದಗೆಟ್ಟ ಕಾರಣ, ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ತಿಮ್ಮಕ್ಕನನ್ನು ಅಡ್ಮಿಟ್ ಮಾಡಿಸಿ, ಚಿಕಿತ್ಸೆ ಕೊಡಲಾಗಿತ್ತು. ಇದೀಗ ತಿಮ್ಮಕ್ಕ ಸುಧಾರಿಸಿಕೊಳ್ಳುತ್ತಿದ್ದು, ಆಕೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಲಾಗಿದೆ.

Yallamma Devi : ಬೆಳಗಾವಿ: ಯಲ್ಲಮ್ಮನ ಸನ್ನಿಧಿಯಲ್ಲಿ 1.03 ಕೋಟಿ ಕಾಣಿಕೆ ಸಂಗ್ರಹ

HalaShree: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಾಲಾಶ್ರೀ ಕೋಟಿ ವಂಚನೆ..!

ಸರ್ಕಾರಿ ಕಾಲೇಜಿನಲ್ಲಿ ಸೌಲಭ್ಯವಿರದ ಕಾರಣ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು..!

- Advertisement -

Latest Posts

Don't Miss