Political News: ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, 14500 ಮೆಟ್ರಿಕ್ ಟನ್ ಪ್ರತಿ ತಿಂಗಳು ಜೋಳ ಪಶು ಆಹಾರಕ್ಕೆ ಬೇಕು. ರಾಜ್ಯದ ಸಹಕಾರಿ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ. ಸಂಬಂಧಪಟ್ಟ ಎಲ್ಲಾ ಇಲಾಖೆಗೆ ನಾನು ಕೆಎಂಎಫ್ ನಿರ್ದೇಶಕನಾಗಿ ಪತ್ರ ಬರೆದಿದ್ದೇನೆ ಎಂದು ಸಚಿವ ರಾಜಣ್ಣಗೆ ಟಾಂಗ್ ಕೊಟ್ಟಿದ್ದಾರೆ.
ಕೆಎಂಎಫ್ ನಿಂದ ಮೆಕ್ಕೆ ಜೋಳ ಖರೀದಿ ಮಾಡಿ ಎಂದು ಒತ್ತಾಯ ಮಾಡಿದ್ದ ರೇವಣ್ಣಗೆ, ಸಚಿವ ರಾಜಣ್ಣ ತಿರುಗೇಟು ನೀಡಿದ್ದರು. ಇದಕ್ಕೆ ಟಾಂಗ್ ನೀಡಿರುವ ರೇವಣ್ಣ, ನಾನು ನಿರ್ದೇಶಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ನಾವು ಲೂಟಿ ಮಾಡಬೇಕು, ನಮ್ಮ ಸರ್ಕಾರ ಇರೋದು ಐದು ವರ್ಷ ಲೂಟಿ ಮಾಡಬೇಕು ಎಂದು ನಿಮ್ಮ ಭಾವನೆ ಇದ್ದರೆ ಏನು ಮಾಡಲು ಆಗಲ್ಲ ಎಂದು ಹೇಳಿದ್ದಾರೆ.
ಕೆಎಂಎಫ್ ಎಂಡಿ ದುಡ್ಡು ಹೊಡಿಬೇಕು ಎಂದರೆ ನಾವೇನು ಮಾಡಲು ಆಗುತ್ತೆ..? ನಾನು ಮಾಜಿ ಸಚಿವನಾಗಿ ಕೆಎಂಎಫ್ ಸಭೆಗೆ ಭಾಗಿಯಾಗಿದ್ದೇನೆ. ನಾನು ಕೇಳದೇ ಇದ್ದರೂ ಸಹಕಾರಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಮಾಡಬೇಕಲ್ಲವೇ..? ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್ ಗೈಡ್ ಲೈನ್ ಅಡಿಯಲ್ಲೇ ದೊಡ್ಡ ಪ್ರಮಾಣದಲ್ಲಿ ರಾಗಿ ಜೋಳ ಬೆಳೆ ನಷ್ಟವಾಗಿದೆ. 73950 ಹೆಕ್ಟೇರ್ ರಾಗಿ ಜೋಳ ರಾಗಿ ಬೆಳೆ ನಾಶವಾಗಿದೆ .
ಅಧಿಕಾರಿಗಳ ಪ್ರಕಾರವೇ ಜಿಲ್ಲೆಯಲ್ಲಿ 64 ಕೋಟಿ 77 ಲಕ್ಷ ಮೌಲ್ಯದ ಬೆಳೆ ನಾಶವಾಗಿದೆ. 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ನಾಶವಾಗಿದೆ. ಜಿಲ್ಲೆಯಲ್ಲಿ ಏಳು ಸಾವಿರ ಹೆಕ್ಟೇರ್ ಆಲೂಗಡ್ಡೆ ಬೆಳೆ ನಾಶವಾಗಿದೆ. ತೆಂಗು ಬೆಳೆ ಕೂಡ ರೋಗದಿಂದ ಇಡೀ ಬೆಳೆ ನಾಶವಾಗೊ ಆತಂಕ ಇದೆ. ಈ ಸರ್ಕಾರಕ್ಕೆ ಇದನ್ನು ಗಮನಿಸಲು ಟೈ ಇಲ್ಲ ಇದರದು ಬೇರೆ ಕೆಲಸ. ಕೆಎಂಎಫ್ ಅನ್ನು ಲೂಟಿ ಹೊಡೆಯೋರಿಗೆ ಬಿಡೋದಾದರೆ ಬಿಟ್ಟು ಬಿಡಲಿ ನನ್ನದೇನಿಲ್ಲ ಎಂದು ರೇವಣ್ಣ ಟಾಂಗ್ ನೀಡಿದ್ದಾರೆ..
ಅಕ್ಟೋಬರ್ 10 ರ ರಾತ್ರಿ ತಮ್ಮ ಆಪ್ತ ಅಶ್ವಥ್ ಮೇಲೆ ಅಟ್ಯಾಕ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇವಣ್ಣ, ಎಸ್ ಪಿ ಜಿ ಭದ್ರತೆ ಇದ್ದಾಗಲೇ ನಮ್ಮ ತಾಯಿ ಮೇಲೆ ಅಟ್ಯಾಕ್ ಆಗಿತ್ತು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಎಂಪಿ ಚುನಾವಣೆ ಬರುತ್ತೆ. ನಾವೇನಾದ್ರು ಹೆದರಿಕೊಂಡು ಕೂರ್ತಿವಿ ಅಂದುಕೊಳ್ಳೋದು ಬೇಡಾ. ಹಾಸನದ ಎಸ್ಪಿ ಹೊಸಬರಿದ್ದಾರೆ ಅವರು ತನಿಖೆ ಮಾಡ್ತಾ ಇದಾರೆ ಹಾಗಾಗಿ ನಾನು ಏನು ಮಾತಾಡಲ್ಲ. ಜಿಲ್ಲೆಯಲ್ಲಿ ರೌಡಿ ಗಳನ್ನ ಮಟ್ಟ ಹಾಕಬೇಕು, ಮಟ್ಕ ನಿಲ್ಲಿಸಬೇಕು ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, . ನಾವು ಮೈತ್ರಿ ಯಾರ ಜೊತೆಗಾದ್ರು ಮಾಡಿಕೊಳ್ತೀವಿ ಇವರಿಗೇನು..? ಚುನಾವಣೆ ಬಂದಾಗ ನಾವು ಸೀಟ್ ಹಂಚಿಕೆ ಬಗ್ಗೆ ಮಾತಾಡುತ್ತೇವೆ. ಬಹುಶಃ ಈ ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಭಯ ಶುರುವಾಗಿರಬೇಕು ಎಂದು ರೇವಣ್ಣ ಹೇಳಿದ್ದಾರೆ.
ಚಳಿಗಾಲದಲ್ಲಿ ಹೆಚ್ಚಾಗಲಿದೆ ತಾಪಮಾನ; ಕೃಷಿಭೂಮಿ ಮೇಲೆ ಪರಿಣಾಮ; ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ..!
ಪಟಾಕಿ ಉಗ್ರಾಣಗಳ ದಾಸ್ತಾನು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ
ಕೊಯ್ಯುವುದೇ ಬೇಡ ಬೆಲೆ ಕೇಳಿದರೆ ಕಣ್ಣೀರು ಬರುತ್ತೆ..! ಈರುಳ್ಳಿ ಬೆಲೆ ರಾಕೇಟ್ ವೇಗದಲ್ಲಿ ಏರಿಕೆ..!