Prajwal deveraj; ಮತ್ತೊಂದು ಸವಾಲಿನ ಪಾತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಸಿದ್ದ..!

ಸಿನಿಮಾ ಸುದ್ದಿ: ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್. ಆರಂಭದಲ್ಲಿ ಲವ್ವರ್ ಬಾಯ್ ಆಗಿ ಆ ನಂತರ ಕ್ರಮೇಣವಾಗಿ ಭಿನ್ನ..ವಿಭಿನ್ನ.. ಪಾತ್ರಗಳನ್ನ ಮಾಡುವುದರ ಮೂಲಕ ಸೈ ಅನಿಸಿಕೊಂಡ ಪ್ರಜ್ವಲ್ ದೇವರಾಜ್ ಸದ್ಯಕ್ಕೆ ತಮ್ಮ‌ ನಲವತ್ತನೇ ಚಿತ್ರಕ್ಕೆ ಅಣಿಯಾಗ್ತಿದ್ದಾರೆ. ಮತ್ತೊಂದು ಸವಾಲಿನ‌ ಪಾತ್ರಕ್ಕೆ ಸಿದ್ಧರಾಗ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಅಭಿನಯದ ಈ ನಲವತ್ತನೇ ಸಿನಿಮಾವನ್ನ ಗುರುದತ್ ಗಾಣಿಗ ನಿರ್ದೇಶನ ಮಾಡಲಿದ್ದಾರೆ. ಹಿಂದೆ ತಮ್ಮ ಚೊಚ್ಚಲ ಪ್ರಯತ್ನ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಕಿಚ್ಚ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳಿದ್ದ ಗುರುದತ್ ಗಾಣಿಗ, ಈ ಬಾರಿ ಕಂಬಳ‌ದ ಕ್ರೀಡೆಯನ್ನ ತಮ್ಮ ಕಥೆಯ ಕೇಂದ್ರ ಬಿಂದುವನ್ನಾಗಿಸಿಕೊಂಡಿದ್ದಾರೆ. ಪೋಸ್ಟರ್ ಒಂದನ್ನ ಅನಾವರಣ ಮಾಡುವುದರ ಮೂಲಕ ಕುತೂಹಲವನ್ನೂ ಕೆರಳಿಸಿದ್ದಾರೆ.

ದಕ್ಷಿಣ ಕನ್ನಡದ ಆಚಾರ.. ವಿಚಾರದ ಸುತ್ತ ಸಾಗುವ ಈ ಸಿನಿಮಾದಲ್ಲಿ‌ ಕಂಬಳದ ಕ್ರೀಡೆ ಹಾಗೂ ಅದರ ಹಿಂದಿನ‌ ಬೆವರು..ಕಣ್ಣೀರು.. ಪ್ರತಿಷ್ಠೆ.. ರಾಜಕೀಯ.. ಮೇಲು.. ಕೀಳು.. ಹೀಗೆ ಅನೇಕ ವಿಚಾರವನ್ನ‌ ಗುರುದತ್ ಗಾಣಿಗ ಇಲ್ಲಿ ಹೇಳುವ ಪ್ರಯತ್ನವನ್ನ ಮಾಡ್ತಿದ್ದಾರೆ. ಇನ್ನೂ ಜನವರಿಯಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಇದುವರೆಗೆ ನೀವೂ ನೋಡಿರದ ಪ್ರಜ್ವಲ್  ದೇವರಾಜ್ ಅವರನ್ನ ತೋರಿಸುವ ಪ್ರಯತ್ನವನ್ನೂ ಕೂಡ ನಿರ್ದೇಶಕರು ಮಾಡ್ತಿದ್ದಾರೆ. ಚಿತ್ರದ ಪೂರ್ವ ತಯಾರಿ ಎಂಬಂತೆ ಕುಂದಾಪುರದಲ್ಲಿ ನಲವತ್ತು ದಿನಗಳ‌ ಕಾಲ ಕಾರ್ಯಾಗಾರವನ್ನೂ ಹಮ್ಮಿಕೊಂಡಿದ್ದಾರೆ.

ಮಿಕ್ಕಂತೆ ಚಂದ್ರಶೇಖರ್ ಬಂಡಿಯಪ್ಪ ಕಥೆಯನ್ನ ಬರೆದಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಹಣ ಹಾಗೂ ಸಚಿನ್ ಬಸ್ರೂರ್ ಸಂಗೀತ ಚಿತ್ರಕ್ಕಿದೆ. ಚಿತ್ರದ ಶೀರ್ಷಿಕೆಯನ್ನ ಸದ್ಯದಲ್ಲಿ ಬಿಡುಗಡೆ ಮಾಡುವ ಆಲೋಚನೆ ಪ್ರಜ್ವಲ್ ಹಾಗೂ ಗುರುದತ್ ಗಾಣಿಗ ಅವರಿಗೆ ಇದೆ.

Priya wariyar : ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಮಲಯಾಳಿ ಬೆಡಗಿ..!

Dhruva Sarja : ಥಾಯ್ಲೆಂಡ್ ಗೆ ಹೊರಟ ಮಾರ್ಟಿನ್ ಧ್ರುವ ಸರ್ಜಾ..? !

Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!

 

About The Author