Tuesday, October 28, 2025

Latest Posts

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ ಬರ್ಬರ ಹತ್ಯೆ

- Advertisement -

Kolar crime news: ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ, ದಲಿತ ಮುಖಂಡ ಕೌನ್ಸಿಲರ್ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಲಾಗಿದೆ.

ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ ಕಾಮಗಾರಿ ವೀಕ್ಷಣೆ ಹೋಗಿದ್ದಾಗ ಆರು ಜನ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

ಎದೆ, ತಲೆ, ದೇಹದ ಮೈಮೇಲೆ ಗಂಭೀರ ಗಾಯಗೊಂಡಿದ್ದ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶ್ರೀನಿವಾಸ್‌ ಕಾರು ಚಾಲಕ ಪ್ರತಿಕ್ರಿಯಿಸಿ, 6 ಮಂದಿ ವ್ಯಕ್ತಿಗಳು ಮಾತನಾಡಲು ಆಗಮಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಮುಖದ ಮೇಲೆ ಸ್ಪ್ರೇ ಸಿಂಪಡಿಸಿದ್ದಾನೆ. ನಂತರ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಕೃತ್ಯ ಎಸಗಿದವರು ನಮ್ಮ ಏರಿಯಾದ ಹುಡುಗರೇ ಎಂದು ತಿಳಿಸಿದ್ದಾರೆ.

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

ಮರ್ಯಾದಾ ಹತ್ಯೆ ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಗಳನ್ನೇ ಹತ್ಯೆ ಮಾಡಿದ ತಂದೆ..

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

- Advertisement -

Latest Posts

Don't Miss