Friday, May 17, 2024

Latest Posts

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

- Advertisement -

Health Tips: ನೀವು ಯಾವುದಾದರೂ ಡಾಕ್ಟರ್ ಲೈವ್ ನೋಡುತ್ತಿದ್ದರೆ, ಅದರಲ್ಲಿ ಸೋರಿಯಾಸಿಸ್ ಅನ್ನೋ ಖಾಯಿಲೆಯ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೂ ಆ ಖಾಯಿಲೆ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಹಾಗಾಗಿ ನಾವಿಂದು ಸೋರಿಯಾಸಿಸ್ ಅಂದ್ರೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತ ನೀಡಲಿದ್ದೇವೆ.

ವೇದಂ ಆಯುರ್ವೇದ ಆಸ್ಪತ್ರೆಯ, ಖ್ಯಾತ ಆಯುರ್ವೇದ ವೈದ್ಯರಾದ ಡಾ.ರವಿರಾಜ್ ಸೋರಿಯಾಸಿಸ್‌ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸೋರಿಯಾಸಿಸ್ ಅಂದ್ರೆ ಭಯಂಕರವಾದಂಥ ಚರ್ಮದ ಖಾಯಿಲೆ. ಈ ರೋಗ ಬಂದಾಗ, ಇದು ಬರೀ ಚರ್ಮದ ಮೇಲಷ್ಟೇ ಅಲ್ಲ, ಬದಲಾಗಿ ಮನುಷ್ಯನ ಮನಸ್ಸಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ, ಸೋರಿಯಾಸಿಸ್ ಬಂದವರು ಖಿನ್ನತೆಗೆ ಒಳಗಾಗುತ್ತಾರೆ.

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ, ನಮ್ಮ ದೇಹದ ವಿರುದ್ಧವಾಗಿ ಕಾರ್ಯ ನಿರ್ವಹಿಸಿದಾಗ, ಬರುವ ರೋಗವೇ ಸೋರಿಯಾಸಿಸ್. ಹಲವರು ಸೋರಿಯಾಸಿಸ್ ಅಂದ್ರೆ ಬರೀ ಚರ್ಮಕ್ಕೆ ಅಂಟಿಕೊಂಡ ಖಾಯಿಲೆ ಅಂತಾ, ಹಲವರು ಅಂದುಕೊಂಡಿರುತ್ತಾರೆ. ಆದರೆ ಇದು ಬರೀ ಚರ್ಮಕ್ಕಷ್ಟೇ ಅಲ್ಲ. ಬದಲಾಗಿ, ಇದು ದೇಹದ ಒಳಗೂ ಈ ಖಾಯಿಲೆ ಹರಡಿರುತ್ತದೆ.

ಹಾಗಾಗಿ ಇದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಇಲ್ಲದಿದ್ದಲ್ಲಿ, ಈ ರೋಗ ಮೂಳೆವರೆಗೆ ತಲುಪುವ ಸಾಧ್ಯತೆ ಇರುತ್ತದೆ. ಇನ್ನು ಈ ಖಾಯಿಲೆ ಯಾವ ವಯಸ್ಸಿನಲ್ಲಿ ಬರುತ್ತದೆ ಎಂದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಚಿಕ್ಕ ಮಕ್ಕಳಿಂದ, ಮುಂದುಕರವರೆಗೂ ಯಾರಿಗೆ ಬೇಕಾದರೂ ಈ ಖಾಯಿಲೆ ಬರಬಹುದು. ಹಾಗಾಗಿ ಇದಕ್ಕೆ ಸರಿಯಾದ ಚಿಕಿತ್ಸೆ, ಔಷಧಿ, ಪಥ್ಯದ ಅವಶ್ಯಕತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

Adress plate .
Vedam Ayurveda multi speciality hospital
No 125 7th main 1st B cross 1st Stage Btm layot Banglore
Mob 7090000218

www.vedamayurveda.co.in

‘ಜೀನಿಯಿಂದ ಶರೀರದಲ್ಲಿ ಹಲವು ಬದಲಾವಣೆಗಳಾಗಿದೆ’

ಮಲೇರಿಯಾ ಜ್ವರದ ಲಕ್ಷಣಗಳು ಏನೇನು..?

ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ಈ ಜ್ವರ ಬರುತ್ತದೆ..

- Advertisement -

Latest Posts

Don't Miss