ಹಣ ಪಡೆದೂ ಅಶ್ಲೀಲ ಫೋಟೋ ವೈರಲ್ ಮಾಡಿದ ದುಷ್ಟರು

Hubballi News: ಹುಬ್ಬಳ್ಳಿ: ಕೊಟ್ಟ ಹಣ ವಾಪಸ ಕೊಡದಿದ್ದರೆ ನಿಮ್ಮ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಧಾರವಾಡದ ರಮಾನಂದ ಎಂಬ ವ್ಯಕ್ತಿಗೆ ಅಪರಿಚಿತರು ಬ್ಲಾೃಕ್‌ಮೇಲ್ ಮಾಡಿದ್ದಾರೆ.

ಅಲ್ಲದೇ 9 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರೂ ಫೋಟೋಗಳನ್ನು ವೈರಲ್ ಮಾಡಿ ವಂಚಿಸಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೀರೋ ರುಪಿ ಲೋನ್ ಆ್ಯಪ್ ಮೂಲಕ ಹಣ ವರ್ಗಾವಣೆ ಮಾಡಿದ್ದ ಅಪರಿಚಿತರು, ಅದನ್ನು ಮರಳಿ ಹಾಕಬೇಕು. ಇಲ್ಲದಿದ್ದರೆ ನಿಮ್ಮ ಮರ್ಯಾದೆ ಕಳೆಯುವುದಾಗಿ ಹೆದರಿಸಿದ್ದಾರೆ. ಹೆದರಿದ ವ್ಯಕ್ತಿ ಹಣವನ್ನೂ ವರ್ಗಾಯಿಸಿದ್ದಾರೆ. ಆದರೂ ದೂರುದಾರರ ಮೊಬೈಲ್ ಫೋನ್‌ನಲ್ಲಿದ್ದ ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಎಲ್ಲರಿಗೂ ಕಳುಹಿಸಿ ಮೋಸ ಮಾಡಿದ್ದಾರೆ ಎಂದು ರಮಾನಂದ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹುಬ್ಬಳ್ಳಿ: ಇನ್ನೊಂದೆಡೆ ಯುವತಿ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದ ಯುವಕನೊಬ್ಬ, ನನ್ನನ್ನು ಮದುವೆಯಾಗದಿದ್ದರೆ ಅಶ್ಲೀಲ ಪೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣ ಸಿಇಎನ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ. ನಾಗೇಶ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ತಾಯಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

KPSC ಎಕ್ಸಾಂನಲ್ಲಿ ಮಾಂಗಲ್ಯ ಸರ ತೆಗೆಸಿದ ಸಿಬ್ಬಂದಿ

ಕಾಂಗ್ರೆಸ್’ನವರು ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ: Govind Karajola

ಕಮಲ ಪಡೆಗೆ ಮತ್ತೊಂದು ಶಾಕ್ ಕೊಟ್ಟ ಜಗದೀಶ್ ಶೆಟ್ಟರ್; ಬಿಜೆಪಿಯ ಮತ್ತೊಬ್ಬ ಮಾಜಿ ಶಾಸಕ ಕಾಂಗ್ರೆಸ್ಗೆ

About The Author