Cricket News: ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಯುವ ಆಟಗಾರ ಶುಭಮನ್ ಗಿಲ್(Gill And Sara) ಅವರು ಬುಧವಾರ ಪ್ರಕಟಗೊಂಡ ಐಸಿಸಿ ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಇದೇ ವಿಚಾರವಾಗಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್(sachin tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (sara tendulkar) ಅವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಒಂದು ಈಗ ಬಾರಿ ಸದ್ದು ಮಾಡುತ್ತಿದೆ.
ಸಾರಾ ಪೋಸ್ಟ್ನಲ್ಲಿ ಏನಿದೆ?
ಶುಭಮನ್ ಗಿಲ್(shubman gill) ಅವರ ಪ್ರೇಯಸಿ ಎಂದು ಹೇಳಲಾಗುತ್ತಿರುವ ಸಾರ ತೆಂಡೂಲ್ಕರ್ ಅವರು ತಮ್ಮ ಟ್ವೀಟರ್ ಎಕ್ಸ್ ಖಾತೆಯಲ್ಲಿ ‘ವಿಶ್ವದ ನಂ.1 ಬ್ಯಾಟರ್, ಶುಭಮನ್ ಗಿಲ್’ ಎಂದು ಬರೆದು ಹಾರ್ಟ್ ಮತ್ತು ಲವ್ ಸಿಂಬಲ್ನ ಎಮೊಜಿಯನ್ನು ಹಾಕಿದ್ದಾರೆ. ಈ ಟ್ವೀಟ್ ನಕಲಿಯಂತೆ ಕಾಣುತ್ತಿಲ್ಲ ಕಾರಣ ಇಲ್ಲಿ ಬ್ಲ್ಯೂ ಟಿಕ್ ಕೂಡ ಇದೆ. ಹೀಗಾಗಿ ಸಾರಾ ಅವರೇ ಇದನ್ನು ತಮ್ಮ ತಮ್ಮ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದಂತಿದೆ.
ಮುಂಬೈನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಅವರು 92 ರನ್ ಗಳಿಸಿ ಕೇವಲ 8 ರನ್‌ಗಳಿಂದ ಶತಕವಂಚಿತರಾದಗ ಪ್ರೇಕ್ಷರಕ ಸ್ಟ್ಯಾಂಡ್ನಲ್ಲಿ ಕುಳಿತ್ತಿದ್ದ ಸಾರಾ ತೆಂಡೂಲ್ಕರ್ ಕೂಡ ಬೇಸರ ಗೊಂಡಿದ್ದರು. ಇದು ಕ್ಯಾಮೆರ ಕಣ್ಣಲ್ಲಿ ಸೆರೆಯಾಗಿತ್ತು. ಆ ಬಳಿಕ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ. ಗಿಲ್ ಅವರನ್ನು ನೋಡಲು ಸಾರಾ ಮೈದಾನಕ್ಕೆ ಹೋಗುತ್ತಿರುವ ಕಾರಣ ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.
‘ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಅನ್ನೋದು ಪಾರ್ಲಿಮೆಂಟ್ ಚುನಾವಣೆಯ ಇನ್ನೊಂದು ಡ್ರಾಮಾ’
ಪತ್ನಿಗೆ ಅತ್ಯಂತ ದುಬಾರಿ ಕಾರ್ ಗಿಫ್ಟ್ ನೀಡಿದ ಅಂಬಾನಿ: ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..
‘ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತೀವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ’