Hubballi Political News: ಹುಬ್ಬಳ್ಳಿ: ಧಾರವಾಡ ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಪೇಡಾನಗರಿಯ ಕಮಲಪಡೆ ಒಡೆದ ಮನೆಯಂತಾಗಿದೆ.
ನಿನ್ನೆ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದು, ಈ ಸಮಾರಂಭಕ್ಕೆ ಧಾರವಾಡದ ಇಬ್ಬರು ನಾಯಕರು ಆಹ್ವಾನಿಸಲಾಗಿತ್ತು. ಆದರೂ ಕೂಡ, ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಮುನಿಸಿಕೊಂಡಿರುವ ಈ ನಾಯಕರು, ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಈ ಮೂಲಕ, ಧಾರವಾಡದಲ್ಲಿ ಬಿಜೆಪಿ ಭಿನ್ನಮತ ಸೃಷ್ಟಿಯಾಗಿದೆ.
ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಎಸ್.ಐ.ಚಕ್ಕನಗೌಡ್ರು ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇವರಿಬ್ಬರು ಈ ಮೊದಲು, ಬಿಜೆಪಿ ರಾಜ್ಯ ರಾಜಕಾರಣದಲ್ಲಿ, ಲಿಂಗಾಯಿತರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಈ ವೇಳೆ ಲಿಂಗಾಯಿತರ ಕಡೆಗಣನೆ ಸರಿ ಮಾಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸೂಚನೆ ಕೂಡ ನೀಡಿದ್ದರು.
ಇಷ್ಟಾದರೂ ಇವರಿಬ್ಬರ ಅಸಮಾಧಾನ ಮಾತ್ರ ಶಮನವಾಗಿರಲಿಲ್ಲ. ಹೀಗಾಗಿ ಈ ಇಬ್ಬರು ನಾಯಕರು ಬೇಸರಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎದುರು ಬಿಜೆಪಿ ಭದ್ರಕೋಟೆಯನ್ನು ಸರಿಪಡಿಸುವ ಸವಾಲು ಇದೆ. ಲಿಂಗಾಯಿತರಿಗಾದ ಈ ಅನ್ಯಾಯವನ್ನನು ವಿಜಯೇಂದ್ರ ಸರಿಪಡಿಸುತ್ತಾರಾ ಅಂತಾ ಕಾದು ನೋಡಬೇಕಿದೆ.
ಸಾಕು ನಾಯಿ ಕಚ್ಚಿದ ಪ್ರಕರಣ: 15 ನಿಮಿಷ ವಿಚಾರಣೆಗೆ ಹಾಜರಾದ ನಟ ದರ್ಶನ್
ಕಿಂಗ್ ಕೊಹ್ಲಿ 50ನೇ ಶತಕ ಸಿಡಿಸಿದ್ದಕ್ಕೆ ಕ್ರಿಕೇಟ್ ದೇವರು ಹೇಳಿದ್ದೇನು..?
ಬಿಗ್ ಬಾಸ್ನಲ್ಲಿ ಜೋಡಿ ಆಗಿದ್ದೂ ಇವರೇ, ಕೇಸ್ ಹಾಕಿಸಿಕೊಂಡಿದ್ದೂ ಇವರೇ, ಎಂಥ ಕಾಕತಾಳೀಯ