Thursday, February 6, 2025

Latest Posts

ಮೂವರು ಅನಾಥ ಹೆಣ್ಣು ಮಕ್ಕಳ ಶಿಕ್ಷಣದ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ ಸಚಿವ ಸಂತೋಷ್‌ ಲಾಡ್‌

- Advertisement -

Dharwad News: ಧಾರವಾಡ: ಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಅನಾಥ ಮೂವರು ಮಕ್ಕಳ ವಿದ್ಯಾಭ್ಯಾಸದ ಖರ್ಚುವೆಚ್ಚ ನೀಡುವುದಾಗಿ ಭರವಸೆ ನೀಡಿದರು.

ಕ್ಷೇತ್ರ ಪ್ರವಾಸದಲ್ಲಿರುವ ಸಚಿವ ಲಾಡ್‌ ಅವರು ಇಂದು ಬೆಣಚಿಯಲ್ಲಿ ಅಹವಾಲು ಸ್ವೀಕರಿಸಲು ಆಗಮಿಸಿದ್ದರು. ಈ ವೇಳೆ ಮೂವರು ಮಕ್ಕಳು ತಂದೆ ತಾಯಿ ಇಲ್ಲದೆ, ತೊಂದರೆಯಲ್ಲಿರುವುದನ್ನು ಸಾರ್ವಜನಿಕರೊಬ್ಬರು ಸಚಿವರ ಗಮನಕ್ಕೆ ತಂದರು. ಆಗ ಪ್ರತಿಕ್ರಿಯಿಸಿದ ಸಚಿವರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ತಿಳಿಸಿದರು.

“ಮೂವರು ಹೆಣ್ಣು ಮಕ್ಕಳಿಗೆ ಸಹಾಯ ಕೋರಿ ಸಮಾಜ ಕಲ್ಯಾಣ ಇಲಾಖೆಗೆ ತಿಳಿಸಿದ್ದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ ತಂದೆ ತಾಯಿ ಇಲ್ಲದೇ, ಮಕ್ಕಳು ಶಾಲೆಗೆ ಹೋಗದೇ ತೊಂದರೆಯಲ್ಲಿದ್ದಾರೆ. ” ಎಂದು ಸಚಿವರಿಗೆ ತಿಳಿಸಿದರು.

ಆಗ ಪ್ರತಿಕ್ರಿಯಿಸಿದ ಸಚಿವರು, ” ಊರಿನವರು ಯಾರಾದರೂ ಜವಾಬ್ದಾರಿ ತೆಗೆದುಕೊಂಡರೆ ನಾನು ಮಕ್ಕಳನ್ನು ಓದಿಸುತ್ತೇನೆ” ಎಂದು ಭರವಸೆ ನೀಡಿದರು. ಮಕ್ಕಳು ಅಜ್ಜಿಯೊಬ್ಬರ ಆಶ್ರಯದಲ್ಲಿರುವ ಬಗ್ಗೆ ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಆಗ ಅಜ್ಜಿಯನ್ನು ಸ್ಥಳಕ್ಕೆ ಕರೆದ ಸಚಿವರು, ” ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ಸಿಗುತ್ತಿದೆಯೇ. ರೇಷನ್‌ ಕಾರ್ಡ್‌ ಇದೆಯೇ” ಎಂದು ವಿಚಾರಿಸಿದರು.

ಆಗ ಅಂಗನವಾಡಿ ಕಾರ್ಯಕರ್ತೆಯನ್ನು ಸ್ಥಳಕ್ಕೆ ಕರೆದು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣ ಪಡೆಯಲು ಅಜ್ಜಿಗೆ ಸಹಾಯ ಮಾಡುವಂತೆ ತಿಳಿಸಿದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದ ಸಚಿವರ ಹೃದಯವಂತಿಕೆ ಸಾರ್ವಜನಿಕರ ಪ್ರಶಂಸೆ ಪಾತ್ರವಾಯಿತು.

ಸಂತೋಷ್‌ ಲಾಡ್‌ ಅವರು ತಮ್ಮ ಸಂತೋಷ್‌ ಲಾಡ್‌ ಫೌಂಡೇಶನ್‌ ಮೂಲಕ ಬಡ, ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಧನಸಹಾಯ ಸೇರಿದಂತೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದಾರೆ. ಯಾರೇ ಅವರ ಬಳಿಗೆ ನೆರವು ಕೋರಿ ಬಂದರೆ ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ.

ತುಮಕೂರು ತಾಲೂಕು ಕಚೇರಿಗೆ ಸಚಿವರ ಧಿಡೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು

‘ಪ್ರಧಾನಿ ಮೋದಿಯವರ ಈ ನಡೆಯನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು?’

‘ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು’

- Advertisement -

Latest Posts

Don't Miss