Tuesday, February 4, 2025

Latest Posts

ಅಲ್-ಶಿಫಾ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳು ಸ್ಥಗಿತ: ಶಿಶುಗಳು ಸೇರಿ 24 ರೋಗಿಗಳ ಸಾವು

- Advertisement -

International News: ಕಳೆದ ಮೂರು ದಿನಗಳಿಂದ ಇಸ್ರೇಲ್ ಸೇನೆ ಹಮಾಸ್ ಉಗ್ರರು ಅಡಗಿದ್ದ ಗಾಜಾದ ಅಲ್ ಶಿಫಾ ಆಸ್ಪತ್ರೆಯಲ್ಲೇ ದಾಳಿ ನಡೆಸಿದ್ದು, ಮೂಲೆ ಮೂಲೆ ಹುಡುಕಿ, ಉಗ್ರರನ್ನು ಮತ್ತು ಅವರ ಶಸ್ತ್ರಾಸ್ತ್ರಗಳನ್ನು ಹೊರತೆಗೆದಿದ್ದಾರೆ. ಆದರೆ ತಂದೆ ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಹಾಗೆ, ಈ ಆಸ್ಪತ್ರೆಯಲ್ಲಿ ಇಂಧನ ಕೊರತೆಯಿಂದ ಅಗತ್ಯ ಸೇವೆಗಳು ಸ್ಥಗಿತಗೊಂಡಿದ್ದು, 24 ರೋಗಿಗಳು ಸಾವನ್ನಪ್ಪಿದ್ದಾರೆ.

ಅಲ್ ಶಿಫಾ ಆಸ್ಪತ್ರೆಯಿಂದ ಉಗ್ರನ ಮನೆಗೆ ಸುರಂಗ ನಿರ್ಮಿಸಲಾಗಿತ್ತು. ಅಲ್ಲೇ ಹಮಾಸ್ ಉಗ್ರರು ಓಡಾಡುತ್ತಿದ್ದರು. ಅವರು ಬಳಸುತ್ತಿದ್ದ ಬಟ್ಟೆ, ಶಸ್ತ್ರಾಸ್ತ್ರ, ಅಡುಗೆ ಪಾತ್ರೆಗಳು, ಬಾತ್ರೂಮ್, ಟಾಯ್ಲೇಟ್ ರೂಮ್, ಎಲ್ಲದರ ವ್ಯವಸ್ಥೆ ಆ ಸುರಂಗ ಮಾರ್ಗದಲ್ಲಿ ಮಾಡಲಾಗಿತ್ತು. ಈ ವಿಚಾರ ತಿಳಿದ ಇಸ್ರೇಲ್ ಸೇನೆ, ಹಲವು ಕಾರ್ಯಾಚರಣೆ ನಡೆಸಿ, ಆಸ್ಪತ್ರೆಯನ್ನು ಸುತ್ತುವರೆದು, ದಾಳಿ ಮಾಡಿದ್ದಾರೆ.

ನಿನ್ನೆ ಇಸ್ರೇಲ್ ಸೈನಿಕರು, ಉಗ್ರರು ಅಡಗಿದ್ದ ಜಾಗದಲ್ಲಿ ಬುಲ್ಡೋಜರ್ ಕೂಡ ಏರಿಸಿದ್ದರು. ಆದರೆ ಇವರಿಬ್ಬರ ಜಗಳದಲ್ಲಿ, ಅಲ್ ಶಿಫಾ ಆಸ್ಪತ್ರೆಯಲ್ಲಿ, ಆಮ್ಲಜನಕ, ಇಂಧನ ಸೇರಿ, ಹಲವು ಮೂಲಭೂತ ವ್ಯವಸ್ಥೆಗಳ ಸರಬರಾಜು ಸರಿಯಾಗಿ ಆಗದ ಕಾರಣ, ಚಿಕಿತ್ಸೆ ನೀಡುವ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಹಾಗಾಗಿ ಶಿಶುಗಳು ಸೇರಿ 24 ರೋಗಿಗಳು ಸಾವನ್ನಪ್ಪಿದ್ದಾರೆ.

ಒಟ್ಟಾರೆಯಾಗಿ ಇಸ್ರೇಲ್ ಸೇನೆ- ಹಮಾಸ್ ಉಗ್ರರ ಹಠದಲ್ಲಿ ಅಮಾಯಕ ನಾಗರಿಕರು, ರೋಗಿಗಳು ಕಷ್ಟ ಅನುಭವಿಸುತ್ತಿರುವುದು, ಸಾವನ್ನಪ್ಪುತ್ತಿರುವುದು ಮಾತ್ರ ವಿಪರ್ಯಾಸ.

5 ಪ್ಯಾಲೆಸ್ತಿನ್ ಭಯೋತ್ಪಾದಕರ ಹತ್ಯೆ: ಇಸ್ರೇಲ್ ಸೇನೆ

ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ನಿಂದ ಬುಲ್ಡೋಜರ್ ಅಟ್ಯಾಕ್

ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಯೋಧೆ ಸಾವು

- Advertisement -

Latest Posts

Don't Miss