Rayachuru News: ರಾಯಚೂರು: ಪ್ರಜ್ಞೆ ತಪ್ಪಿ ಬಿದ್ದ ಪತ್ನಿಯನ್ನು ಪತಿ ನೇಣುಬಿಗಿದು ಕೊಲೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರು ನಗರದ ಪಟೇಲವಾಡಿಯಲ್ಲಿ ನಡೆದಿದೆ.
ಭುವನೇಶ್ವರಿ (31) ಕೊಲೆಯಾದ ಮಹಿಳೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ ಪತಿ ನಾಗರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆರಂಭದಲ್ಲಿ ಚನ್ನಾಗಿಯೇ ಇದ್ದರು. ಆದರೆ ಇತ್ತೀಚೆಗೆ ಆರೋಪಿ ಪತಿ ನಾಗರಾಜ್ ಪ್ರತಿನಿತ್ಯ ಮದ್ಯಸೇವಿಸಿ ಬಂದು ಜಗಳ ಮಾಡುತ್ತಿದ್ದ.
ಅದೇ ರೀತಿ ಗಲಾಟೆ ವೇಳೆ ಪತ್ನಿ ಮೇಲೆ ನಾಗರಾಜ್ ಕೈ ಮಾಡಿದ್ದಾನೆ. ಈ ವೇಳೆ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ, ಮೃತಳ ಪೋಷಕರು ದೂರು ನೀಡಿದ್ದಾರೆ. ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂ ಬಂಪರ್ ಬಹುಮಾನ!: ಆಸ್ಟ್ರೋಟಾಕ್ ಸಿಇಒ ಘೋಷಣೆ
ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.
ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ