Hubballi News: ಹುಬ್ಬಳ್ಳಿ: ಸೈಬರ್ ಕ್ರೈಮ್ ಎನ್ನುವುದು ಇದೀಗ ಹೆಮ್ಮರವಾಗಿ ಹಬ್ಬಿದೆ, ಸಾಮಾನ್ಯ ಜನರಿಗಷ್ಟೇ ಸೈಬರ್ ಕ್ರೈಂ ಇಂದ ಮೋಸವಾಗುತ್ತಿತ್ತು. ಆದರೆ ಇದೀಗ ಕ್ರೈಂ ಮಾಡುವವರನ್ನು ಪತ್ತೆ ಮಾಡುವ ಪೊಲೀಸರಿಗೂ ಸೈಬರ್ ಕ್ರೈಂ ತನ್ನ ಕೈಚಳಕ ತೋರಿಸುತ್ತಿದೆ. ಹೌದು ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಎಂಬುವವರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 8.25 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ. ಈ ಸಂಬಂಧ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ಸ್ಪೆಕ್ಟರ್ ದಯಾನಂದ ಅವರು ವ್ಯಯಕ್ತಿಕವಾಗಿ ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳದೆ ಇದ್ದರೂ ಕೂಡ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ.
ಬ್ಯಾಂಕ್ ನವರು ನೆಟ್ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೂ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು, ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಸಂದರ್ಭದಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 50,000 ಅನ್ನು 12 ಬಾರಿ, 45,000 ಯನ್ನು 3 ಬಾರಿ, 25,000 ಯನ್ನು ಎರಡು ಬಾರಿ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ
Zameer Ahmed Khan ವಾಸ್ತವ್ಯವಿದ್ದ ಹೋಟೆಲ್ ಮೇಲೆ ತಡರಾತ್ರಿ ಪೊಲೀಸರ ದಾಳಿ




