Sunday, December 22, 2024

Latest Posts

‘ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಜನರೇ ಇವರಿಗೆ ತಕ್ಕ ಉತ್ತರ ನೀಡುತ್ತಾರೆ’

- Advertisement -

Kolar News: ಕೋಲಾರ : ಕೋಲಾರದಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಡಿಕೆಶಿ ಮೇಲಿನ ಸಿಬಿಐ ಕೇಸ್ ವಾಪಸ್ಸು ಪಡಿಯುವ ಕುರಿತು ಹೇಳಿಕೆ ನೀಡಿದ್ದಾರೆ.

ಇಡಿ ಶಿಫಾರಸ್ಸು ಮಾಡಿದಕ್ಕೆ ನಾವು ಸಿಬಿಐಗೆ ವಹಿಸಿದ್ವಿ. ಎಲ್ಲಾ ರಾಜಕೀಯ ಪಕ್ಷದವರ ಮೇಲೆ ಸಿಬಿಐ ಕೇಸ್ ಗಳಿವೆ. ಇಂತಹ ನಿರ್ಧಾರಗಳು ಹಿಂದೆ ನಡೆದಿಲ್ಲ. ಕಾನೂನು ಸಲಹೆ ಪಡೆದು ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಚಾರ್ಜ್ ಶೀಟ್ ಆಗುವ ವೇಳೆ ಈ ರೀತಿ ಮೂರ್ಖತನ ಕೆಲಸ ಮಾಡಿದ್ದಾರೆ. ಜನರೇ ಇವರಿಗೆ ತಕ್ಕ ಉತ್ತರ ನೀಡುತ್ತಾರೆ. ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಈ ತರಹದ ನಿರ್ಧಾರ ಮಾಡಿಲ್ಲ. ಕಾನೂನು ಮತ್ತು ರಾಜಕಾರಣಕ್ಕೆ ಸಂಘರ್ಷ ಆಗುವಂತೆ ಮಾಡಿದೆ. ನಾನು ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಡಿಕೆಶಿ ಗೆ ಇರಬೇಕಾಗಿತ್ತು. ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಸರ್ಕಾರದ ಘೋರ ಅಪರಾಧ ಮಾಡಿದೆ ಎಂದು ಶ್ರೀರಾಮುಲು ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಮೈತ್ರಿ ಸರ್ಕಾರ ಪತನ ಎಂದು ಆರ್.ಅಶೋಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಕಾಂಗ್ರೆಸ್ ಸರಕಾರಕ್ಕೆ ಜನರು ಬಹುಮತ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರನ್ನು ಜನರೆ ಬೆನ್ನಟ್ಟಿ ಕಲ್ಲಲ್ಲಿ ಹೊಡಿತ್ತಾರೆ. 5 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಬೇಕು. ಆಗ ಮಾತ್ರ ಸರ್ಕಾರದ ಬಂಡವಾಳ ಜನರಿಗೆ ತಿಳಿಯಲಿದೆ. ಶೇ.25 ರಷ್ಟು ಜನರಿಗೆ ಆಶ್ವಾಸನೆಗಳು ತಲುಪಿಲ್ಲ. ಅನುದಾನ ಇಲ್ಲದೆ ಶಾಸಕರು ಕ್ಷೇತ್ರದಲ್ಲಿ ಓಡಾಡಲು ಆಗ್ತಿಲ್ಲ.

ರಾಜ್ಯ ಬಿಜೆಪಿಯ ಭಿನಮತ ಕುರಿತು ಮಾತನಾಡಿದ ಶ್ರೀರಾಮುಲು, ಯತ್ನಾಳ್ ಹಾಗೂ ಸೋಮಣ್ಣ ಇಬ್ಬರು ಪಾರ್ಟಿಯ ಹಿರಿಯ ನಾಯಕರು. ಬಿಜೆಪಿ ಯಲ್ಲಿ ಕಿರಿಯರಾದ ವಿಜಯೇಂದ್ರ ಅವರಿಗೆ ಅಧಿಕಾರ ನೀಡಿದಕ್ಕೆ ಅಸಮಾಧಾನ ಗೊಂಡಿದ್ದಾರೆ. BSY, ಯತ್ನಾಳ್, ಸೋಮಣ್ಣ ಮಾರ್ಗದರ್ಶನದಲ್ಲೇ ವಿಜಯೇಂದ್ರ ಮುಂದುವರೆಯುತ್ತಾರೆ. ಸೋಮಣ್ಣ ಎಲ್ಲಾ ಪಾರ್ಟಿಯನ್ನು ನೋಡಿಕೊಂಡು ಬಂದಿದ್ದಾರೆ. ಅವರನ್ನು ಬಿಜೆಪಿ ಯಲ್ಲೇ ಉಳಿಸಿಕೊಳ್ಳುವ ಕೆಲಸ ಆಗಲಿದೆ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ಒಳಗೆ ಜಗಳ ಕುರಿತು ಡಿಕೇಶಿಗೆ ಖೆಡ್ಡಾ ತೋಡಿದ್ದಾರೆ ಅಂತ ಆರ್.ಅಶೋಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಗಂಡ ಹೆಂಡತಿ ರೀತಿ ಕಾಂಗ್ರೆಸ್ ನಲ್ಲಿ ಜಗಳವಾಡ್ತಾರೆ, ರಾತ್ರಿ ಒಂದಾಗುತ್ತಾರೆ.
ಸರ್ಕಾರ ಎಷ್ಟು ದಿನಗಳ ಕಾಲ ಇರುತ್ತೆ ಅನ್ನೋದನ್ನ ನೋಡಬೇಕು ಎಂದಿದ್ದಾರೆ.

ಜನಾರ್ಧನ ರೆಡ್ಡಿ ಬಿಜೆಪಿ ವಾಪಸ್ಸು ಆಗುವ ಚರ್ಚೆ ಕುರಿತು ಮಾತನಾಡಿದ ಶ್ರೀರಾಮುಲು, ಬಿಜೆಪಿಗೆ ವಾಪಸ್ಸು ಬರುವ ಚರ್ಚೆ ಆಗ್ತಿದೆ. ಎಲ್ಲರೂ ಸೇರಿದ್ರೆ ಪಾರ್ಟಿ ಆಗುತ್ತೆ,ಕೇವಲ ರಾಮುಲು ಮಾತ್ರವಲ್ಲ. ಆ ವಿಚಾರದಲ್ಲಿ ನನ್ನದು ಅಭ್ಯಂತರವಿಲ್ಲ ಎಂದು ಸ್ರೀರಾಮುಲು ಹೇಳಿದ್ದಾರೆ.

ಜಾತಿ ಗಣತಿ ವಿಚಾರ ಕುರಿತು ಮಾತನಾಡಿದ ಶ್ರೀರಾಮುಲು, ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಸರ್ಕಾರ ವರದಿಯನ್ನು ಸ್ವೀಕಾರ ಮಾಡಬೇಕು. ವರದಿಯನ್ನು ಜಾರಿಗೆ ತರುವ ಕೆಲಸ ಸರ್ಕಾರ ಮಾಡಬೇಕು ಎಂದಿದ್ದಾರೆ.

‘ನಾವು ಐದಾರು ಜನ ಸೇರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಬೇಕೆಂದಿದ್ದೇವೆ’

ಕರ್ನಾಟಕ ಟಿವಿ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ

ಸೋಮಣ್ಣರಿಗೆ ನಾನು ಸಪೋರ್ಟ್ ಮಾಡ್ತೀನಿ: ಸಂಸದ ಜಿ.ಎಸ್.ಬಸವರಾಜ್

- Advertisement -

Latest Posts

Don't Miss